ಪಾಣೆಮಂಗಳೂರು ಹೋಬಳಿಯ ನರಿಕೊಂಬು, ಶಂಭೂರು, ಪಾಣೆಮಂಗಳೂರು, ಬಂಟ್ವಾಳ ಮೂಡ ಗ್ರಾಮಗಳ ಕಂದಾಯ ಮತ್ತು ಪಿಂಚಣಿ ಅದಾಲತ್ ನರಿಕೊಂಬು ಗ್ರಾಪಂ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಂದಾಯ ಅದಾಲತ್ ನ ಮೂಲ ಉದ್ದೇಶ ಪಹಣಿ ಪತ್ರಿಕೆ ಯಲ್ಲಿ ಲೋಪದೋಷಗಳು ಇದ್ದರೆ ಪಹಣಿ ಸರಿಪಡಿಸುವಿಕೆ, ಪಹಣಿ ಶುದ್ಧೀಕರಣ ಆಗಿದೆ. ಪಿಂಚಣಿಗೆ ಸಂಬಂದಿಸಿದಂತೆ ಮಾಸಾಶನ ಪಡೆಯುವ ಬಡ ಫಲಾನುಭವಿಗಳಿಗೆ ಯಾವುದೇ ರೀತಿಯ ಕುಂದುಕೊರತೆ ಬಾರದಂತೆ ನೋಡಿ ಕೊಳ್ಳುವ ಸಲುವಾಗಿ ಪಿಂಚಣಿ ಅದಾಲತ್ ನಡೆಸಲಾಗುತ್ತದೆ. ಸಾರ್ವಜನಿಕರು ಈ ಅದಾಲತ್ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭೂಮಿ ಶಾಖೆಯ ಶಿರಸ್ತೇದಾರ್ ಶ್ರೀಧರ್ ತಿಳಿಸಿದರು.
ಈ ಸಂದರ್ಭದಲ್ಲಿ ಆರ್. ಆರ್ ಟಿ. ಶಾಖೆಯ ರೇಖಾ, ಅಭಿವೃದ್ಧಿ ಅಧಿಕಾರಿ ಶಿವು ಜನಕೊಂಡ, ಬಿ ಮೂಡ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಪಾಣೆಮಂಗಳೂರು ಗ್ರಾಮ ಲೆಕ್ಕಾಧಿಕಾರಿ ವಿಜೇತಾ, ನರಿಕೊಂಬು ಗ್ರಾಮ ಲೆಕ್ಕಾಧಿಕಾರಿ ಆಥಿಕ್ ಕುಮಾರ್ ಹಾಜರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಶಂಭೂರು. ಜಯರಾಜ್. ರಂಜಿತ್ ನರಿಕೊಂಬು ಉಪಸ್ಥಿತರಿದ್ದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.
ಬಂಟ್ವಾಳನ್ಯೂಸ್ ಸಂಪಾದಕ: ಹರೀಶ ಮಾಂಬಾಡಿ
for advertisements Contact: 9448548127