ಗೆಜ್ಜೆಗಿರಿಗೆ ಮಂಗಳವಾರ ಬಂಟ್ವಾಳದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಈ ಸಂದರ್ಭ ಬಿಲ್ಲವ ಸಮಾಜದ ಪ್ರಮುಖರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಮೆರವಣಿಗೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಸಮೀಪ ಸಾಗುವ ಸಂದರ್ಭ ಬಿ.ಸಿ.ರೋಡಿನ ಮುಸ್ಲಿಂ ಬಾಂಧವರು ಶೋಭಾಯಾತ್ರೆಯಲ್ಲಿ ತೆರಳುವವರಿಗೆ ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದರು.
ಪರ್ಲಿಯಾದ ಮಡಿಕೇರಿ ಶರೀಫ್ ನೇತೃತ್ವದಲ್ಲಿನ ತಂಡ ತಂಪು ಪಾನೀಯ, ಮಜ್ಜಿಗೆಗಳನ್ನು ವಿತರಿಸಿದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಪುರಸಭೆ ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಲುಕ್ಮಾನ್, ಭಾರತೀಯ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಇಕ್ಬಾಲ್, ಪ್ರಮುಖರಾದ ಸಮದ್ ಕೈಕಂಬ, ಆದಂ ಅದ್ದೇನಿ, ಸಾದಿಕ್, ಇಕ್ಬಾಲ್ ನಂದರಬೆಟ್ಟು, ಸಮದ್ ಗೂಡಿನಬಳಿ, ಫಾರೂಕ್ ಗೂಡಿನಬಳಿ, ಮುಸ್ತಾಫಾ ಕೋಡಪದವು, ಅಶ್ರಫ್ ಲೊರೆಟ್ಟೊಪದವು, ಖಾಸಿಂ ನಂದಾವರ, ಜಲೀಲ್ ತಾಳಿಪಡ್ಪು ಜತೆಗಿದ್ದರು. ನಾಗೇಶ್ ಸಹಕರಿಸಿದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ