SKSSF ಮಿತ್ತಬೈಲ್ ಕ್ಲಸ್ಟರ್ ಹಾಗೂ ವಾಫಿ ಮಂಗಳೂರು ಓರ್ಬಿಟ್ ಇದರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ಪರೀಕ್ಷೆ ಎದುರಿಸುವುದು ಹೇಗೆ ?’ ಎಂಬ ವಿಷಯದಲ್ಲಿ ಫೆ.16 ರಂದು ಪರ್ಲಿಯಾ ಮದ್ರಸ ವಠಾದಲ್ಲಿ ನಡೆಯಿತು.
ಪರ್ಲಿಯಾ ಮಸೀದಿ ಖತೀಬರಾದ ಬಹು ತ್ವಯ್ಯಿಬ್ ಫೈಝಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. SKSSF ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಶಾಂತಿ ಅಂಗಡಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಬಹು ಜಂಶೀರ್ ವಾಫಿ, ಕಣ್ಣೂರು, ಕೇರಳ ಮತ್ತು ಕೆಐಸಿ ಕುಂಬ್ರ ಉಪನ್ಯಾಸಕರಾದ ಜನಾಬ್ ಕೆ.ಪಿ. ನವಾಝ್ ಕಟ್ಟದಪಡ್ಪು ವಿಷಯವನ್ನು ಮಂಡಿಸಿದರು.
ಪರ್ಲಿಯಾ ಮಸೀದಿ ಅಧ್ಯಕ್ಷರಾದ ಅಹ್ಮದ್ ಬಾವಾ, ವಿಖಾಯ ಕೇಂದ್ರ ಸಮಿತಿ ಸದಸ್ಯರಾದ ಬಶೀರ್ ಮಜಲ್, SKSSF ಮಿತ್ತಬೈಲ್ ಕ್ಲಸ್ಟರ್ ಉಪಾಧ್ಯಕ್ಷರಾದ ಅಲ್ತಾಫ್ ಮಿತ್ತಬೈಲ್, SKSSF ಮಿತ್ತಬೈಲ್ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ತುಂಬೆ, ಸುಹೈಲ್ ಮೂಡಬಿದ್ರೆ, ಶಫೀಖ್ ಜೋಕಟ್ಟೆ, ಮುಹಮ್ಮದ್ ತುಫೈಲ್ ನಂದರಬೆಟ್ಟು, ನಾಫಿಅ್ ಶಾಂತಿ ಅಂಗಡಿ, SKSSF ಪರ್ಲಿಯಾ ಶಾಖೆ ಅಧ್ಯಕ್ಷರಾದ ಮುಹಮ್ಮದ್ ವಾಜಿದ್, SKSSF ಮಿತ್ತಬೈಲ್ ಕ್ಲಸ್ಟರ್ ಕೋಶಾಧಿಕಾರಿಯಾದ ಮುಹಮ್ಮದ್ ಶಬೀರ್ ಪಲ್ಲಮಜಲ್ ಉಪಸ್ಥಿತರಿದ್ದರು. SKSSF ಮಿತ್ತಬೈಲ್ ಕ್ಲಸ್ಟರ್ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ತಾಲಿಪಡ್ಪು ಸ್ನಾಗತಿಸಿದರು. ಮುಹಮ್ಮದ್ ನಾಸೀರ್ ಜಿ.ಕೆ ವಂದಿಸಿದರು. ಮುಹಮ್ಮದ್ ಶಾಕೀರ್ ಶಾಂತಿ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.