ದ.ಕ.ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಬಂಟ್ವಾಳ ವಲಯದ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಸಮಾರಂಭ ಉದ್ಘಾಟಿಸಿ ಸಂಘದ ಕಟ್ಟಡಕ್ಕೆ ಸ್ಥಳಾವಕಾಶದ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್, ಜಿಲ್ಲಾ ಸಂಘದ ಅಧ್ಯಕ್ಷ ಗುಣಪಾಲ್, ಬಂಟ್ವಾಳ ಕಾರ್ಮಿಕ ಅಧಿಕಾರಿ ಮರ್ಲಿನ್ ಗ್ರಾಸಿಯಾ ಡಿಸೋಜಾ ಭಾಗವಹಿಸಿದ್ದರು. ವಲಯದ ಅಧ್ಯಕ್ಷ ವಿಶ್ವನಾಥ ಬಿ. ಅಧ್ಯಕ್ಷತೆ ವಹಿಸಿದ್ದರು. ಸುಧೀರ್ ಪೂಜಾರಿ ವರದಿ ಮಂಡಿಸಿದರು. ಪ್ರಶಾಂತ್ ಭಂಡಾರ್ಕರ್ ಲೆಕ್ಕಪತ್ರ ಮಂಡಿಸಿದರು.
ತಾಲೂಕಿನ ಆಯ್ದ 8 ಸರಕಾರಿ ಶಾಲೆಗಳ 16 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಾಜಿ ಸೈನಿಕ ದಯಾನಂದ, ಗಾಡ್ವಿನ್ ಡಿಮೆಲ್ಲೊ, ಕರಾಟೆಯಲ್ಲಿ ಭವಿಷ್ ಹಾಗೂ ಜಿಲ್ಲಾ ಸಂಘದ ನಿರ್ದೇಶಕ ದಿವಾಕರ್ ಅವರನ್ನು ಸನ್ಮಾನಿಸಲಾಯಿತು. ಶ್ರೀರಾಮ ವಿದ್ಯಾಕೇಂದ್ರದ ಅನ್ನದಾಸೋಹ ಹಾಗೂ ನಲ್ಕೆಮಾರ್ ಶಾಲೆಯ ಅಭಿವೃದ್ಧಿಗೆ ಧನಸಹಾಯ ನೀಡಲಾಯಿತು. ಸಿದ್ಧಿಕ್ ಮೆಲ್ಕಾರ್ ಸ್ವಾಗತಿಸಿದರು. ಸುಧಾಕರ್ ಸಾಲ್ಯಾನ್ ಪ್ರಸ್ತಾವನೆಗೈದರು. ಉಮೇಶ್ ಶೆಟ್ಟಿ ವಂದಿಸಿದರು. ಸಂತೋಷ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.