ಮಂಗಳೂರು: ಬಿಜೆಪಿಯ ದ.ಕ.ಜಿಲ್ಲಾ ಎಸ್ಸಿ ಮೋರ್ಚಾದ ಪದಾಧಿಕಾರಿಗಳು, ಮಂಡಲ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜನಪ್ರತಿನಿಧಿಗಳನ್ನೊಳಗೊಂಡ ಸಭೆ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆಯಿತು.
ಪೌರತ್ವ ಕಾಯ್ದೆ, ಸಿಎಎ, ಎನ್.ಆರ್.ಸಿ. ಕಾಯ್ದೆಯನ್ನು ಬೆಂಬಲಿಸುವಂತೆ ಕ್ಷೇತ್ರಗಳ ಜನರಿಗೆ ಮನವರಿಕೆ ಮಾಡಲು ಪರಿಶಿಷ್ಟ ಜಾತಿಯ ಬಿಜೆಪಿ ಜನಪ್ರತಿನಿಧಿಗಳಿಗೆ ಸೂಚಿಸಲಾಯಿತು. ಬೂತ್ ಮಟ್ಟಗಳಲ್ಲಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಸಮುದಾಯದವರ ಮನೆ ಮನೆಗೆ ಸಂಪರ್ಕ ಮಾಡಿ ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಜನಜಾಗೃತಿ ಸಭೆಗಳನ್ನು ಮಾಡಬೇಕಾಗಿ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ತಿಳಿಸಿದರು
ಅದಲ್ಲದೆ ಸಿಎಎ ಮತ್ತು ಎನ್ಆರ್ಸಿ ಬಗ್ಗೆ ಚಿಂತನ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮಗಳು ಜನವರಿ 26ರಂದು ತೀರ್ಮಾನಿಸಲಾಯಿತು ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿನಯ ನೇತ್ರ, ಶೀನ ಮಾಸ್ತಿಕಟ್ಟೆ, ಬಿ ಎಸ್ ವಸಂತ್ ಕುಮಾರ್, ರಾಜ್ಯ ಕಾರ್ಯದರ್ಶಿ ದಕ್ಷಿಣದ ಅಧ್ಯಕ್ಷ ಉಮನಾಥ್ ಅಮೀನ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಮನೋಜ್ ಕುಮಾರ್ ಹಾಗೂ ಭರತ್ ಕುಮಾರ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು
IFTAAR ORGANISED BY FORMER MINISTER RAMANATHA RAI AT PANEMANGALORE (more…)