ರಸ್ತೆ ಅಪಘಾತ ತಡೆಯುವ ಹಿನ್ನೆಲೆಯಲ್ಲಿ ಸುರಕ್ಷತೆ ಕುರಿತು ಹೆಚ್ಚಿನ ಗಮನಹರಿಸಬೇಕು ಎಂದು ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ವೆಲಂಟೈನ್ ಡಿಸೋಜ ಹೇಳಿದರು.
ಬಂಟ್ವಾಳ ಟ್ರಾಫಿಕ್ ಠಾಣಾ ವತಿಯಿಂದ ಬಿಸಿರೋಡಿನಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳಿಗೆ ಗುಲಾಬಿ ಹೂ ನೀಡಿದ ಅವರು ಸುರಕ್ಷತೆ ಕುರಿತು ಎಚ್ಚರಿಕೆ ವಹಿಸುವಂತೆ ಕರೆ ನೀಡಿದರು. ಈ ವೇಳೆ ಶಾಲಾ ಮಕ್ಕಳ ಜಾಥಾ ನಡೆಯಿತು. ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ನಗರ ಠಾಣಾ ಎಸ್. ಐ.ಅವಿನಾಶ್ , ಸಂಚಾರಿ ಟ್ರಾಫಿಕ್ ಎಸ್.ಐ.ರಾಮನಾಯ್ಕ , ಸೈಬರ್ ಕ್ರೈಮ್ ವಿಭಾಗದ ಮುಖ್ಯಸ್ಥ ಮುಖೇಶ್ ಉಪಸ್ಥಿತರಿದ್ದರು. ಎ.ಎಸ್.ಐ.ಬಾಲಕೃಷ್ಣ ಸ್ವಾಗತಿಸಿದರು. ಟ್ರಾಫಿಕ್ ಸಿಬ್ಬಂದಿ ಪ್ರಶಾಂತ್ ವಂದಿಸಿದರು. ಸಿಬ್ಬಂದಿ ವಿವೇಕ್ ಕಾರ್ಯಕ್ರಮ ನಿರೂಪಿಸಿದರು.