ಬಂಟ್ವಾಳ ವಕೀಲರ ಸಂಘದ ವಾರ್ಷಿಕ ಕ್ರೀಡಾಕೂಟ-೨೦೨೦ ಪಾಣೆಮಂಗಳೂರು ಶ್ರೀ ಶಾರದಾ ಹೈಸ್ಕೂಲ್ ಮೈದಾನದಲ್ಲಿ ಜರಗಿತು. ಹಿರಿಯ ವಕೀಲರಾದ ಅಜಿತ್ ಕುಮಾರ್ ರಾವ್ ಉದ್ಘಾಟಿಸಿದರು.
ನೆಟ್ಲ ಕನ್ನಡ ಶಾಲೆ ಉಳಿಸಿ ಅಭಿಯಾನದ ಸಂಘಟಕರು ಹಾಜರಿದ್ದು ಕನ್ನಡ ಶಾಲೆ ಉಳಿಸಲು ಸಹಕಾರ ನೀಡುವಂತೆ ವಕೀಲರ ಸಂಘವನ್ನು ಕೋರಿದರು. ಅಭಿಯಾನಕ್ಕೆ ವಕೀಲರು ಸಹಕಾರ ನೀಡುವುದಾಗಿ ಘೋಷಿಸಿದರು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಆಶ್ವನಿ ಕುಮಾರ್ ರೈ, ಉಮೇಶ್ ಕುಮಾರ್ ವೈ, ಸುರೇಶ್ ಪೂಜಾರಿ, ಬಿ.ವೆಂಕಟ್ರಮಣ ಶೆಣೈ, ಪದಾಧಿಕಾರಿಗಳಾದ ಉಪಾಧ್ಯಕ್ಷ ಚಂದ್ರಶೇಖರ ರಾವ್ ಪುಂಚಮೆ, ಜತೆ ಕಾರ್ಯದರ್ಶಿ ವಿನೋದಾ ಉಪಸ್ಥಿತರಿದ್ದರು. ಕ್ರೀಡಾ ಕಾರ್ಯದರ್ಶಿ ರಾಜೇಶ್ ಬೊಳ್ಳುಕಲ್ಲು ಸ್ವಾಗತಿಸಿದರು. ಶೈಲಜಾ ರಾಜೇಶ್ ವಂದಿಸಿದರು. ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)