ಕಾರೊಂದು ನಿರ್ಮಾಣದ ಹಂತದಲ್ಲಿರುವ ಸೇತುವೆಯ ಗುಂಡಿಗೆ ಬಿದ್ದು ಚಾಲಕ ಗಾಯಗೊಂಡ ಘಟನೆ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಗುರುವಾರ ನಡೆದಿದೆ.
ಬಂಟ್ವಾಳ ಬೈಪಾಸ್ ಗ್ಯಾರೊಂಜೊಂದರ ಮುಂಭಾಗದಲ್ಲಿ ನಡೆಯುತ್ತಿರುವ ಸೇತುವೆಯ ಕಾಮಗಾರಿಯ ಗುಂಡಿಗೆ ಕಾರು ಬಿದ್ದ ಪರಿಣಾಮ ಚಾಲಕನಿಗೆ ಗಾಯಗಳಾಗಿವೆ. ಕಾರು ಚಾಲಕ ರಾಜೇಶ್ ಬಂಟ್ವಾಳ ಕಡೆಯಿಂದ ಬಿ.ಸಿ.ರೋಡು ಕಡೆಗೆ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಗುಂಡಿಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಬಿ.ಸಿ.ರೋಡು-ಪುಂಜಾಲಕಟ್ಟೆಯವರೆಗೆ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಸಾಕಷ್ಟು ಧೂಳು ಇಲ್ಲಿದ್ದು, ವಾಹನ ಸವಾರರು ಗಲಿಬಿಲಿಗೊಳ್ಳುವ ಸನ್ನಿವೇಶ ನಿರ್ಮಾಣಗೊಳ್ಳುತ್ತಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…