ಕಲ್ಲಡ್ಕ

ಸ್ವಾತಂತ್ರ್ಯ ಯೋಧ ಶ್ಯಾಮರಾಯ ಅಚಾರ್ ಯೋಗಕ್ಷೇಮ ವಿಚಾರಿಸಿದ ತಹಶೀಲ್ದಾರ್ ರಶ್ಮೀ ಎಸ್.ಆರ್

ಸ್ವಾತಂತ್ರ್ಯ ಹೋರಾಟಗಾರ 95ರ ಹರೆಯದ ಶ್ಯಾಮರಾಯ ಆಚಾರ್ ರವರನ್ನು ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ರವರು ಮಂಗಳವಾರ ರಾತ್ರಿ  ಕಲ್ಲಡ್ಕದ ಶಿಲ್ಪಾ ಸದನ ನಿವಾಸದಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಕಳೆದ ಆಗಸ್ಟ್ ಆ.14 ರಂದು ಶಿವಮೊಗ್ಗದಿಂದ ಹೊರಟಿದ್ದ ಇವರು ಬಿ.ಸಿ.ರೋಡಿನಲ್ಲಿ ಆ.15 ರಂದು ನಡೆಯಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಬೇಕಿತ್ತು.  ಆದರೆ ಇವರು ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಆಗುಂಬೆ ಬಳಿ ಬಸ್ಸಿನಿಂದ ಇಳಿದವರು, ಆಕಸ್ಮಿಕವಾಗಿ ಬಿದ್ದು ಸೊಂಟದ ಭಾಗದಲ್ಲಿ ಎಲುಬಿಗೆ ತೊಂದರೆ ಉಂಟಾಗಿ ಒಂದು ಶಸ್ತ್ರ ಚಿಕಿತ್ಸೆ ನಡೆದಿತ್ತು. ಇದೀಗ ವಾರದ ಹಿಂದೆ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕಲ್ಲಡ್ಕ ದ ಮಗಳ‌ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ  ವಿಚಾರ ತಿಳಿದ ತಹಶೀಲ್ದಾರ್ ರಶ್ಮೀ ಯವರು ಮಂಗಳವಾರ ರಾತ್ರಿ ಯೇ ಕಲ್ಲಡ್ಕಕ್ಕೆ ಆಗಮಿಸಿ ಹಿರಿಜೀವದ ಯೋಗಕ್ಷೇಮ ವಿಚಾರಿಸಿದರು.
ತನ್ನ ಭೇಟಿಗೆ ತಾಲೂಕು ದಂಡಾಧಿಕಾರಿಗಳು ಬಂದಿರುವುದಕ್ಕೆ ಸಂತಸದಿಂದ ಅತೀವ ಭಾವುಕರಾದ ಶ್ಯಾಮರಾಯ ಆಚಾರ್ ರವರು,ನಿಮ್ಮಂತ ಯುವ ಅಧಿಕಾರಿಗಳ ಸೇವೆ ಎಲ್ಲರಿಗೂ ಮಾದರಿಯಾಗಲಿ ಎಂದರು.
ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್  ರವರು,  ದೊಡ್ಡ ಸರ್ಜರಿಯ ನೋವನ್ನೂ ಮರೆತು, ನಗು ಮುಖ ದೊಂದಿಗೆ ಜೀವನದ ಹೋರಾಟ ನಡೆಸುತ್ತಿರುವ  ಶ್ಯಾಮರಾಯ ಆಚಾರ್ಯರ ನಗುಮುಖವೇ ನಮಗೆಲ್ಲಾ ಸ್ಪೂರ್ತಿ, ಜ.26 ರ ಗಣರಾಜ್ಯೋತ್ಸವ ಕ್ಕೆ ಬಿ.ಸಿ.ರೋಡಿಗೆ ತಾಲೂಕು ಕಛೇರಿಗೆ ಬರುವಂತಾಗಬೇಕೆಂದರು.
ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ಎಂ ಡಿ ಶ್ಯಾಮರಾಯಾಚಾರ್ ರವರ ಮಗ ಸತೀಶ್, ಹಿರಿಯ ಮಗಳು ಸತ್ಯದೇವಿ ಹಾಗೂ ಅಳಿಯ ಸುರೇಶ್ , ಮೊಮ್ಮಗ, ಪತ್ರಕರ್ತ ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ