ಬಂಟ್ವಾಳ

ಜ.8ರಂದು ಕಾರ್ಮಿಕ ಸಂಘಟನೆಗಳ ಧರಣಿ

ಕೇಂದ್ರ ಸರಕಾರದ ನೀತಿ ವಿರೋಧಿಸಿ, ಜನವರಿ 8ರಂದು ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಅಖಿಲ ಭಾರತ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಇತರ ಸಾರ್ವಜನಿಕ ರಂಗದ ಕಾರ್ಮಿಕ ಸಂಘಟನೆಗಳು ಧರಣಿ ಮುಷ್ಕರ ನಡೆಸಲಿವೆ.

ಜಾಹೀರಾತು

ಬಿ.ಸಿ.ರೋಡಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಸಭೆಯಲ್ಲಿ ಎಐಟಿಯುಸಿ ಬಿ.ಶೇಖರ್, ಸುರೇಶ್ ಕುಮಾರ್ ಬಂಟ್ವಾಳ್, ಸಿಐಟಿಯು ರಾಮಣ್ಣ ವಿಟ್ಲ, ಉದಯ ಕುಮಾರ್, ಸಮನ್ವಯ ಸಮಿತಿ ಮುಖಂಡರುಗಳಾದ ಪ್ರಭಾಕರ ದೈವಗುಡ್ಡೆ, ರಾಜಾ ಚಂಡ್ತಿಮಾರ್, ಸಾದಿಕ್ಬಂಟ್ವಾಳ, ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಮಾಲಕರ ಪರವಾಗಿ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಬಾರದು, ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸುವ ಮಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು., ಗುತ್ತಿಗೆ ಮತ್ತು ದಿನಕೂಲಿ ಕಾರ್ಮಿಕರನ್ನು ಖಾಯಂ ಮಾಡಬೇಕು, ಹೊರ ಗುತ್ತಿಗೆಯನ್ನು ಪೂರ್ಣವಾಗಿ ನಿಲ್ಲಿಸಬೇಕು., ಲಾಭ ಗಳಿಸುತ್ತಿರುವ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಬಾರದು., ಸ್ಕೀಂ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಕೆಲಸದ ಭದ್ರತೆ ಒದಗಿಸಬೇಕು. , ಖಾಸಗೀಕರಿಸುವ ದುರುದ್ದೇಶವಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕುಗಳನ್ನುಪ್ರಮುಖವಾಗಿ ಕರಾವಳಿಯ ಬ್ಯಾಂಕುಗಳನ್ನು, ಹಾಗೂ ಭಾರತೀಯ ಜೀವ ವಿಮಾ ಸಂಸ್ಥೆಗಳನ್ನು ವಿಲೀನಿಕರಿಸಬಾರದು., ಉದ್ಯೋಗ ಸೃಷ್ಟಿಗೆ ಹೆಚ್ಚು ಆದ್ಯತೆ ಕೊಡಬೇಕು.

ಬೀಡಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠಕೂಲಿ, ತುಟ್ಟಿಭತ್ತೆಯನ್ನು ಪಾವತಿಸುವುದಲ್ಲದೆ ಬೀಡಿ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರು ಸವಲತ್ತುಗಳನ್ನು ಒಡೆಯಲು ಒನ್ ಲೈನ್ ವ್ಯವಸ್ಥೆಯನ್ನು ಖಡ್ಡಾಯ ಮಾಡಿರುವುದನ್ನು ನಿಲ್ಲಿಸಬೇಕು., ಕಾರ್ಮಿಕರ ಕನಿಷ್ಠವೇತನವನ್ನು ಮಾಸಿಕ ರೂ.೨೧೦೦೦ ಹೆಚ್ಚಿಸಬೇಕು. , ಎಲ್ಲಾ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ರೂ.೧೦೦೦೦ ಪಿಂಚಣಿ ನೀಡಬೇಕು ಹಾಗೂ ತುಟ್ಟಿಭತ್ತೆ ಏರಿಕೆಗನುಗುಣವಾಗಿ ಪಿಂಚಣಿ ಹೆಚ್ಚಿಸಬೇಕು. , ಬೆಲೆ ಏರಿಕೆಯನ್ನು ತಡೆಗಟ್ಟಬೇಕು., ವಾಹನ ಚಾಲಕರಿಗೆ ಮಾರಕವಾದ ರಸ್ತೆ ಸುರಕ್ಷತಾ ಮಸೂದೆ೨೦೧೫ ನ್ನು ಹಿಂಪಡೆಯಬೇಕು. ಎಂಬ ಬೇಡಿಕೆಗಳನ್ನು ಮಂಡಿಸಲಾಗಿದ್ದು, ದೇಶದಾದ್ಯಂತ ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಲಿರುವುದರಿಂದ ಅಂದು ಬಂಟ್ವಾಳ ತಾಲೂಕಿನ ಸಂಘಟಿತ ವಲಯದ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಬೀಡಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು ಬೀದಿ ಬದಿ ವ್ಯಾಪಾರಸ್ಥರು, ರಿಕ್ಷಾ ಮತ್ತು ಟೂರಿಸ್ಟ್ ಗೂಡ್ಸ್ ವಾಹನ ಚಾಲಕ ಮಾಲಕರು ಎಲ್ಲರೂ ಬಿಸಿರೋಡಿನಲ್ಲಿ ನಡೆಯುವ ಧರಣಿದಲ್ಲಿ ಭಾಗವಹಿಸಬೇಕೆಂದು ಜೆಸಿಟಿಯು ಬಂಟ್ವಾಳ ತಾಲೂಕು ಸಂಚಾಲಕ ಬಿ.ಶೇಖರ್ ಪತ್ರಿಕಾ ಪ್ರಕಟಣೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ