ಮಂಗಳೂರಿನ ಸದ್ಗುರು ಸಂಗೀತ ಪಾಠಶಾಲಾ (ರಿ), ಪಲ್ಲವಿ ಕ್ಲಾಸಿಕಲ್ಸ್ ವತಿಯಿಂದ ಡಿ.25ರಂದು ಕರಂಗಲಪಾಡಿಯ ಸುಬ್ರಹ್ಮಣ್ಯ ಸಭಾದಲ್ಲಿ ಶ್ರೀ ಸೀತಾರಾಮ ಕಲ್ಯಾಣೋತ್ಸವ ಸಹಿತ ಸದ್ಗುರು ಶ್ರೀ ತ್ಯಾಗರಾಜ ಪುರಂದರ ಉತ್ಸವ ನಡೆಯಲಿದೆ ಎಂದು ಸಂಗೀತ ಶಿಕ್ಷಕರಾದ ನಾದಶ್ರೀ ಗಣೇಶ್ ರಾಜ್ ಎಂ.ವಿ. ತಿಳಿಸಿದ್ದಾರೆ.
ವೆಳ್ಳಿಕ್ಕೋತ್ ವಿಷ್ಣು ಭಟ್ ….. ಕೇರಳ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಇವರು ಕಾಸರಗೋಡು ಸರಕಾರಿ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾರೆ. ಸಂಗೀತ ಸೌಹಾರ್ದ ರಥಯಾತ್ರೆ ನಡೆಸುವ ಮೂಲಕ ಪ್ರಸಿದ್ಧರಾದವರು. ಕಾಸರಗೋಡು, ಕಾಞಂಗಾಡ್ ಪರಿಸರದ ಹಲವು ಉದಯೋನ್ಮುಖರಿಗೆ ಸಂಗೀತಾಭ್ಯಾಸ ನಡೆಸಲು, ಹಾಡಲು ಪ್ರೇರಣೆಯಾಗಿರುವ ಇವರು, ಕರ್ನಾಟಕ, ಕೇರಳದ ಹಲವೆಡೆ ಶಾಸ್ತ್ರೀಯ ಸಂಗೀತ ಕಛೇರಿ ಅಲ್ಲದೆ ಸುಗಮ ಸಂಗೀತಗಳನ್ನು ನೀಡಿದ್ದಾರೆ. ಸದ್ಯ ಕಾಞಂಗಾಡ್ ನ ವೆಳ್ಳಿಕ್ಕೋತ್ ನಲ್ಲಿ ವಾಸವಾಗಿದ್ದಾರೆ.ಮಧು ನಿರ್ಮಾಣದ ಮಲಯಾಳಂನ ಮಕ್ಕಳ ಚಲನಚಿತ್ರ ಮಿನಿ ಈ ಸಿನಿಮಾಗೆ ಸಂಗೀತ ನಿರ್ದೇಶನವನ್ನು ಅವರು ಮಾಡಿದ್ದರು. ಸಿನಿಮಾಗೆ 1995ರಲ್ಲಿ ಅವಾರ್ಡ್ ಬಂದಿತ್ತು. ಪ್ರಸಿದ್ಧ ಕುದ್ರೆಕೋಡ್ಲು ಮನೆತನದ ಇವರು ಗೋವಿಂದ ಭಟ್ ಮತ್ತು ಗೌರಿ ಅವರ ಕಿರಿಯ ಪುತ್ರ. ಇವರ ತಾಯಿಯ ತಂದೆ ಪ್ರಸಿದ್ಧ ಯಕ್ಷಗಾನ ಭಾಗವತ ಮಾಂಬಾಡಿ ನಾರಾಯಣ ಭಾಗವತರು.
ಇದೇ ವೇಳೆ ಬೆಳಗ್ಗೆ 8ರಿಂದ ಕಾರ್ಯಕ್ರಮಗಳು ನಡೆಯಲಿದ್ದು, 10ಕ್ಕೆ ನಾದಶ್ರೀ ಗಣೇಶ್ ರಾಜ್ ಎಂ.ವಿ. ಮತ್ತು ಬಳಗದವರಿಂದ ಶ್ರೀ ತ್ಯಾಗರಾಜ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಇರಲಿದೆ. 11 ಗಂಟೆಗೆ ಪಲ್ಲವಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ವಿದ್ವಾಂಸರಾದ ವೆಳ್ಳಿಕ್ಕೋತ್ ವಿಷ್ಣು ಭಟ್ ಕೆ. ಮತ್ತು ಬಾಲಕೃಷ್ಣ ಹೊಸಮನೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ವೇಳೆ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸುವರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…