2020ನೇ ಸಾಲಿಗೆ ಜೇಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷರಾಗಿ ಶ್ರೀನಿಧಿ ಭಟ್ ಟಿ.ಎನ್. ಆಯ್ಕೆಯಾಗಿದ್ದಾರೆ. ಡಿಸೆಂಬರ್ 22ರೆಂದು ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿ ಸಂಜೆ 7 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಬಂಟ್ವಾಳ ಸರ್ಕಲ್ ಪೋಲೀಸ್ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್, ಜೇಸಿಐ ವಲಯ ೧೫ರ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಮತ್ತು ಪದಗ್ರಹಣ ಅಧಿಕಾರಿಯಾಗಿ ವಲಯ ೧೫ರ ವಲಯ ಉಪಾಧ್ಯಕ್ಷ ಜೇಸಿ ಮೇಧಾವಿ ಭಾಗವಹಿಸಲಿರುವರು ಎಂದು ಜೇಸಿ ಅಧ್ಯಕ್ಷ ಹರ್ಷರಾಜ್ ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪದಾಧಿಕಾರಿಗಳಾಗಿ ಶ್ರೀನಿಧಿ ಭಟ್ (ಅಧ್ಯಕ್ಷ), ಹರ್ಷರಾಜ್ ಸಿ (ಐಪಿಪಿ), ಸುಬ್ರಹ್ಮಣ್ಯ ರಾವ್ ಪಿ (ಕಾರ್ಯದರ್ಶಿ), ಲಕ್ಷ್ಮಣ್ (ಜತೆ ಕಾರ್ಯದರ್ಶಿ), ಖಜಾಂಚಿಯಾಗಿ ಕಿಶನ್ ಎನ್. ರಾವ್, ಉಪಾಧ್ಯಕ್ಷರುಗಳಾಗಿ ಆಶಿಕ್ ಕುಕ್ಕಾಜೆ, ಅಮಿತಾ ಹರ್ಷರಾಜ್, ಗಾಯತ್ರಿ ಲೋಕೇಶ್, ಕೃಷ್ಣರಾಜ್ ರಾವ್ ಮತ್ತು ನರಸಿಂಹ ಮಯ್ಯ, ಮಲ್ಲಿಕಾ ಆಳ್ವ (ಜೇಸಿರೆಟ್ ಅಧ್ಯಕ್ಷೆ), ಅಭಿಷೇಕ್ (ಜೇಜೇಸಿ ಅಧ್ಯಕ್ಷ), ಜಯರಾಜ್ ಎಸ್. ಬಂಗೇರ, ಧೀರಜ್ ಹೆಚ್., ಹರಿಶ್ವಂದ್ರ ಆಳ್ವ, ರವೀಂದ್ರ ಕುಕ್ಕಾಜೆ, ಶೈಲಜಾ ರಾಜೇಶ್ ಹಾಗೂ ಹರಿಪ್ರಸಾದ್ ಕುಲಾಲ್ (ನಿರ್ದೇಶಕರು) ಇವರು ಆಯ್ಕೆಗೊಂಡಿರುತ್ತಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…