ಬಂಟ್ವಾಳ ತಾಲೂಕು ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ 22 ರಂದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಡಿಜಿಟಲ್ ಎಕ್ಸ್‌ಪೋ ಕಾರ್ಯಕ್ರಮ ನಡೆಯಲಿದೆ. ಲೆಟರ್ ಪ್ರೆಸ್‌ನಿಂದ ಆರಂಭವಾಗಿ ಮುಂದೆ ಆಫ್‌ಸೆಟ್ ಮುದ್ರಣಕ್ಕೆ ತೆರೆದು ಪ್ರಸ್ತುತ ಡಿಜಿಟಲ್ ಯುಗಕ್ಕೆ ತೆರೆದುಕೊಂಡಿರುವ ಮುದ್ರಣ ರಂಗ ಬದಲಾವಣೆಯ ನಿಟ್ಟಿನಲ್ಲಿ ಮುಂದುವರಿಯುತ್ತಾ ಇದೆ. ಈ ಸಂದರ್ಭ ಮುದ್ರಣಕಾರರಿಗೆ ಮತ್ತು ಮುದ್ರಣ ರಂಗದಲ್ಲಿ ಆಸಕ್ತಿ ಇರುವರಿಗೆ ವಿವಿಧ ಶೈಲಿಯ ಡಿಜಿಟಲ್ ಯಂತ್ರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇದು ವಿನೂತನ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮವನ್ನು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉದ್ಘಾಟಿಸಲಿದ್ದಾರೆ. ಎಕ್ಸ್ಪೋದಲ್ಲಿ ಕೆನಾನ್, ಕೊನಿಕಾ ಮಿನೋಲ್ಟಾ, ಎಚ್‌ಪಿ ಕಂಪೆನಿ, ಬ್ರದರ್, ಗೋದ್ರೆಜ್, ರೀಸೋ, ಡುಪ್ಲೋ ಕಂಪೆನಿಯ ಉತ್ಪನ್ನಗಳು, ಸೆಲ್ಕೋ ಕಂಪೆನಿಯ ಸೋಲಾರ್ ಜೆರಾಕ್ಸ್ ಹಾಗೂ ಸೋಲಾರ್ ಉತ್ಪನ್ನಗಳು ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದ ಸಹಯೋಗದಲ್ಲಿ ಶ್ರೀ ಮಾರುತಿ ಎಂಟರ್‌ಪ್ರೈಸಸ್ ಮೈಸೂರು, ಮಂಗಳೂರಿನ ಶ್ರೀ ಭಾರತಿ ಸಿಸ್ಟಮ್ಸ್, ಥೋನ್ಸೆ ಎಂಟರ್‌ಪ್ರೈಸಸ್, ಸೆಲ್ಕೋ ಸೋಲಾರ್ ಸಂಸ್ಥೆಗಳು, ಅನಿಲ್ ಕಂಪ್ಯೂಟರ್‍ಸ್ ವಹಿಸಲಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಮುದ್ರಣಾಕಾರರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬಹುದು ಹಾಗೂ ಮುದ್ರಣಾಲಯದ ಬಗ್ಗೆ ಆಸಕ್ತಿ ಇರುವ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಕುಮಾರ್ ಭಟ್ ಮತ್ತು ಕಾರ್ಯದರ್ಶಿ ಯಾದವ ಕುಲಾಲ್ ಬಿ.ಸಿ.ರೋಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.