ಕಲ್ಲಡ್ಕ

ಪೆರಾಜೆಯಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

ಬಂಟ್ವಾಳ ತಾಲೂಕಿನ ಬುಡೋಳಿ ಸಮೀಪದ ಪೆರಾಜೆ ಶಾಲಾ ವಠಾರದಲ್ಲಿ ಪೆರಾಜೆ ಯುವಕ‌‌ ಮಂಡಲ (ರಿ) ದ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಗ್ರಾಮ ಸೀಮಿತ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ ನಡೆಯಿತು. ಪೆರಾಜೆ ಯುವಕ ಮಂಡಲದ ನೂತನ ಕಟ್ಟಡದ ಸಹಾಯಾರ್ಥವಾಗಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆದ ಈ ಕಬಡ್ಡಿ ಪಂದ್ಯಾಟವನ್ನು ಪೆರಾಜೆ ಗುತ್ತುವಿನ ಪದ್ಮಾವತಿ ಜಗನ್ನಾಥ ಆಳ್ವ  ಉದ್ಘಾಟಿಸಿದರು.

 

ಜಾಹೀರಾತು

ವಿಶೇಷ ಆಹ್ವಾನಿತರಾಗಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ದೇಶಕ್ಕೆ ಅನೇಕ ಕ್ರೀಡಾಪಟುಗಳನ್ನು ದಕ್ಷಿಣ ಕನ್ನಡ ಜಿಲ್ಲೆ ನೀಡಿದೆ. ಇಲ್ಲಿ ಅನೇಕ ಕ್ರೀಡಾ ಸಾಧಕರಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಪಂ ಸದಸ್ಯೆ ಮಂಜುಳಾ ಕುಶಾಲ ಎಂ, ಪುಷ್ಪ ವಿಶ್ವನಾಥ್ ಪೂಜಾರಿ, ಪತ್ರಕರ್ತ ಶಂಶೀರ್ ಬುಡೋಳಿ, ಪ್ರಮುಖರಾದ ಸನತ್ ಕುಮಾರ್ ರೈ ತುಂಬೆಕೋಡಿ, ಉದಯ ಚೌಟ, ಉಮೇಶ್ ಕುಮಾರ್.ವೈ, ಸುದೀಪ್ ಕುಮಾರ್ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಆದಂ ಕುಂಙ, ಜಗನ್ನಾಥ ಚೌಟ, ಗಂಗಾಧರ್ ರೈ ಶೇರಾ, ಪ್ರವೀಣ್ ಶೆಟ್ಟಿ ಅಳಕೆಮಜಲು, ದೀಪಕ್ ಕುಮಾರ್ ಜೈನ್, ಪ್ರವೀಣ್ ರೈ ಕಲ್ಲಾಜೆ, ಹರೀಶ್ ಪೂಜಾರಿ ಬಾಕಿಲ ಉಪಸ್ಥಿತರಿದ್ದರು. ಕಬಡ್ಡಿ ಕ್ರೀಢೆಯಲ್ಲಿ ಸಾಧನೆ ಮಾಡಿದ ಹಿರಿಯ ಕಬಡ್ಡಿ ಆಟಗಾರರಾದ ಶಶಿಧರ್ ಸೇರಾ, ಹಬೀಬ್ ಮಾಣಿ, ಉಮೇಶ್ ಮುಳಿತ್ತಪಡ್ಪು ಇವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಡಾ.ಶ್ರೀನಾಥ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹರಿಶ್ಚಂದ್ರ ಕಾಡಬೆಟ್ಟು, ಜನಾರ್ಧನ ಕುಲಾಲ್ ಪೇರಮೊಗರು, ಗಂಗಾಧರ ಸೇರಾ, ಮನೋಹರ ರೈ ಅಂತರಗುತ್ತು, ಪುಟ್ಟ ರಂಗನಾಥ ಟಿ, ಮೋನಪ್ಪ ಸಾಲ್ಯಾನ್, ಭಾಸ್ಕರ ಬೀರಕೋಡಿ, ಕಿಶೋರ್ ಪೆರಾಜೆ ಉಪಸ್ಥಿತರಿದ್ದರು. ಮುಕ್ತ ವಿಭಾಗದಲ್ಲಿ ಒಟ್ಟು 30 ಕಬಡ್ಡಿ ತಂಡಗಳು ಭಾಗವಹಿಸಿದವು. ಗ್ರಾಮ ಸೀಮಿತ ಆಹ್ವಾನಿತ ವಿಭಾಗದಲ್ಲಿ ಒಟ್ಟು ಹತ್ತು ತಂಡಗಳು ಇದ್ದವು. ಎಸ್ ವಿಎಸ್ ಉಳ್ಳಾಲ, ಮಾಲಿಂಗೇಶ್ವರ ಕುಂಜತ್ತೂರು, ಎನ್ ಎಚ್ ಬಂಗೇರಕಟ್ಟೆ ಹಾಗೂ ಮಾಣಿ ತಂಡಗಳು ಬಹುಮಾನ ಗಳಿಸಿದವು.

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ