ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಫಾರಸ್ಸಿನ ಮೇರೆಗೆ ಮುಜರಾಯಿ ಇಲಾಖೆಯಿಂದ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ರೂ 1.28 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ.
ವಿಟ್ಲಪಡ್ನೂರು ಗ್ರಾಮದ ಕಾಪು ಶ್ರಿ ಮಲರಾಯ ದೈವಸ್ಥಾನದ 3 ಲಕ್ಷ, ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ– 8 ಲಕ್ಷ, ಅನಂತಾಡಿ ಗ್ರಾಮದ ಬಾಕಿಲ ಶ್ರೀ ಉಳ್ಳಾಲ್ದಿ ವೈದ್ಯನಾಥೇಶ್ವರ ದೈವಸ್ಥಾನ ನವೀಕರಣ– 4 ಲಕ್ಷ, ಕೊಳ್ನಾಡು ಗ್ರಾಮದ ಶ್ರೀ ಚಾಮುಂಡಿ,ಕೊರತಿ ಗುಳಿಗ ಕ್ಷೇತ್ರ ನವೀಕರಣ– 2 ಲಕ್ಷ, ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರಿ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ– 5 ಲಕ್ಷ, ಕನ್ಯಾನ ಗ್ರಾಮದ ಆದಿ ಮುಗೇರ್ಕಳ ದೈವಸ್ಥಾನ ನವೀಕರಣ– 2 ಲಕ್ಷ, ಸಜಿಪಮೂಡ ಗ್ರಾಮದ ಶ್ರಿಮಹಾಗಣಪತಿ ದೇವಸ್ಥಾನ ಅನ್ನಪ್ಪಾಡಿ– 5 ಲಕ್ಷ, ಕೊಳ್ನಾಡು ಗ್ರಾಮದ ಸೆರ್ಕಳ ಶ್ರೀ ಮಾರಿಯಮ್ಮ ಕ್ಷೇತ್ರ– 3 ಲಕ್ಷ, ಅಜ್ಜಿಬೆಟ್ಟು ಗ್ರಾಮದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಅಜ್ಜಿಬೆಟ್ಟು – 8 ಲಕ್ಷ, .ಬಂಟ್ವಾಳ ಕಸ್ಬಾ ಗ್ರಾಮದ ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ– 3 ಲಕ್ಷ, ಕನ್ಯಾನ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಕಣಿಯೂರು– 8 ಲಕ್ಷ, ಸಜಿಪನಡು ಗ್ರಾಮದ ಶ್ರೀ ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ– 10 ಲಕ್ಷ, .ಚೆನ್ನೈತ್ತೋಡಿ ಗ್ರಾಮದ ಶ್ರೀಗುರು ನಿತ್ಯಾನಂದ ಸ್ವಾಮೀಜಿ ಮಂದಿರ ಆಶ್ರಮ ಮಂದಿರ– 2 ಲಕ್ಷ, .ಸಂಗಬೆಟ್ಟು ಗ್ರಾಮದ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಮುಗೇರುಗುಡ್ಡೆ– 5 ಲಕ್ಷ .ಕೊಳ್ನಾಡು ಗ್ರಾಮದ ಕಟ್ಟತ್ತಿಲ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ದೈವಸ್ಥಾನ– 5 ಲಕ್ಷ ರೂ ತೆಂಕಕಜೆಕಾರು ಗ್ರಾಮದ ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನ– 7 ಲಕ್ಷ, .ಬಿ.ಮೂಡ ಗ್ರಾಮದ ಶ್ರೀ ರಾಮಭಕ್ತಾಂಜನೇಯ ಭಜನಾ ಮಂದಿರ ಪಲ್ಲಮಜಲು– 5 ಲಕ್ಷ, .ಬಾಳ್ತಿಲ ಗ್ರಾಮ ಕುದುರೆಬೆಟ್ಟು ಮಹಮ್ಮಾಯಿ,ಪಂಜುರ್ಲಿ ಪರಿವಾರ ದೈವಸ್ಥಾನ– 8 ಲಕ್ಷ, .ಕಡೇಶಿವಾಲ್ಯ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ– 5 ಲಕ್ಷ, ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ– 25 ಲಕ್ಷ, ಮಂಚಿ ಗ್ರಾಮದ ಶ್ರೀ ಸುಳ್ಯ ಮಹಾದೇವ ದೇವಸ್ಥಾನ– 5 ಲಕ್ಷ ಇದರಲ್ಲಿ ಸೇರಿವೆ.