ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದಿದ್ದ ತುಳು ಕತೆ ಹೇಳುವ ಸ್ಪರ್ಧೆ ಮತ್ತು ತುಳು ಹಾಡು ಹೇಳುವ ಸ್ಪರ್ಧೆಯ ವಿಜೇತರಿಗೆ ಭಾನುವಾರ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಬಹುಮಾನ ವಿತರಿಸಿದರು.
ತುಳು ಕಥಾ ಸ್ಪರ್ಧೆಯಲ್ಲಿ ರಿಷಿಕಾ ( ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು) ಪ್ರಥಮ, ಅನನ್ಯ (ಸರಕಾರಿ ಪ್ರೌಢಶಾಲೆ ಪಂಜಿಕಲ್ಲು) ದ್ವಿತೀಯ, ಸಮ್ಯಕ್ ಜೈನ್ ( ಎಸ್ ವಿ ಎಸ್ ಆಂಗ್ಲಮಾಧ್ಯಮ ಶಾಲೆ ವಿದ್ಯಾಗಿರಿ) ಮತ್ತು ಆಕೃತಿ ( ಸರಕಾರಿ ಪ್ರೌಢಶಾಲೆ ಬಿಳಿಯೂರು) ತೃತೀಯ ಬಹುಮಾನ ಪಡೆದರು.
ತುಳು ಹಾಡು ಹೇಳುವ ಸ್ಪರ್ಧೆಯಲ್ಲಿ ದೀಕ್ಷಿತ್ ( ಸರಕಾರಿ ಪ್ರೌಢಶಾಲೆ ಬೆಂಜನಪದವು) ಪ್ರಥಮ, ವೈಷ್ಣವಿ ( ಎಸ್ ಎಲ್ ಎನ್ ಪಿ ವಿದ್ಯಾಲಯ ಪಾಣೆಮಂಗಳೂರು) ದ್ವಿತೀಯ, ದಕ್ಷಾ ಜಿ. ( ಎಸ್ ವಿ ಎಸ್ ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ) ತೃತೀಯ ಸ್ಥಾನ ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್. ಪ್ರಮುಖರಾದ ಸುಭಾಶ್ಚಂದ್ರ ಜೈನ್, ಅಶ್ವನಿ ಕುಮಾರ್ ರೈ, ನಾಗೇಶ್ ಕುಲಾಲ್, ಎಚ್ಕೆ ನಯನಾಡು, ಮಂಜು ವಿಟ್ಲ, ಪಡೆದರು ಸ್ಪರ್ಧಾ ಸಮಿತಿಯ ಸಂಚಾಲಕರಾದ ಕೆ.ರಮೇಶ ನಾಯಕ್ ರಾಯಿ, ಎ.ಗೋಪಾಲ ಅಂಚನ್, ಗಣೇಶ್ ನಾಯಕ್ ವಾಮದಪದವು ಈ ಸಂದರ್ಭ ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127