ಬಂಟ್ವಾಳ

ಬಂಟ್ವಾಳದಲ್ಲಿ ಕಂದಾಯ ಇಲಾಖಾ ನೌಕರರ ಸಂಘ ಜಿಲ್ಲಾ ಮಟ್ಟದ ತ್ರೋಬಾಲ್, ಕ್ರಿಕೆಟ್

ಸದಾ ಕಚೇರಿ ಕಡತಗಳ ಮಧ್ಯೆ ಬ್ಯುಸಿಯಾಗಿರುವ ಕಂದಾಯ ಇಲಾಖೆಯ ನೌಕರರು ತಹಸೀಲ್ದಾರ್, ಅಟೆಂಡರ್ ಎಂಬ ಶ್ರೇಣಿಕೃತ ವ್ಯವಸ್ಥೆಯ ಬೇಧವಿಲ್ಲದೆ ಒಟ್ಟಾಗಿ ಕ್ರಿಕೆಟ್, ತ್ರೋಬಾಲ್ ಪಂದ್ಯಾಟಗಳನ್ನಾಡುವ ಮೂಲಕ ಗಮನ ಸೆಳೆದರು.

ಜಾಹೀರಾತು

 

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

ಬಂಟ್ವಾಳ ಎಸ್.ವಿ.ಎಸ್. ಹೈಸ್ಕೂಲಿನ ಮೈದಾನದಲ್ಲಿ ಭಾನುವಾರ ಬೆಳಗ್ಗೆ ಆರಂಭಗೊಂಡ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ಸ್ವತಃ ಕ್ರಿಕೆಟ್ ಆಡುವ ಮೂಲಕ ಉದ್ಘಾಟಿಸಿದರು. ಪ್ರತಿಯೊಬ್ಬರು  ದೇಹವನ್ನು ದೈಹಿಕವಾಗಿ ದಂಡಿಸಿದಾಗ ಆರೋಗ್ಯ ರಕ್ಷಣೆ ಸಾಧ್ಯ , ಇಂತಹ ಕ್ರೀಡಾ ಕೂಟಗಳು ಇತರರಿಗೂ ಸ್ಪೂರ್ತಿ ಯಾಗಲಿ. ಕೆಲಸದ ಜೊತೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ವನ್ನು ಕಾಪಾಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಜಾಹೀರಾತು


ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಮಾತನಾಡಿ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮನಸ್ಸು ಬಹಳ ಮುಖ್ಯ, ಹೊರತು ಬಹುಮಾನದ ಕನಸು ಯಾವತ್ತೂ ಬೇಡ ಎಂದರು.

ಅಧ್ಯಕ್ಷತೆಯನ್ನು ಕಂದಾಯ ಇಲಾಖಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಮಂಜುನಾಥ್ ವಹಿಸಿದ್ದರು. ಈ ಸಂದರ್ಭ ದಾವಣಗೆರೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಅಂದಾನಪ್ಪ ದಾನಪ್ಪಗೌಡ್ರ, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ, ಬೆಳ್ತಂಗಡಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಕಡಬ ತಹಸೀಲ್ದಾರ್ ಜೋನ್ ಪ್ರಕಾಶ್ ರೋಡ್ರಿಗಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಂದಾಯ ಇಲಾಖಾ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ನವನೀತ್ ಮಾಳವ, ಜಿಲ್ಲಾ ಉಪಾಧ್ಯಕ್ಷ ಜೆ. ಜನಾರ್ದನ ಹಾಗೂ ಜಯಂತ್, ಕೋಶಾಧಿಕಾರಿ ಪ್ರಸನ್ನ ಕುಮಾರ್ ಪಕ್ಕಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ಎಂ, ಕ್ರೀಡಾ ಕಾರ್ಯದರ್ಶಿ ರಂಜಿತ್, ಕಂದಾಯ ಇಲಾಖೆ ನೌಕರರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ನಾನಾ ತಾಲೂಕುಗಳ ಸಂಘದ ಅಧ್ಯಕ್ಷರಾದ ತೌಫೀಕ್, ಮೋಹನದಾಸ್, ಮಹೇಶ್ ಸಿ.ಆರ್, ಮಾರ್ಷೆಲ್ ಟೆಲಿಸ್, ಚಂದ್ರ ನಾಯ್ಕ, ಉಮೇಶ್, ಪ್ರದೀಪ್ ಕುಮಾರ್ ಸಿ, ಹರೀಶ್, ಮೀಯಾಸಾಬ್ ಮುಲ್ಲಾ, ನಾರಾಯಣ, ಶೇಷಾದ್ರಿ, ರಮಾನಂದ, ಕಿಶೋರ್ ಕುಮಾರ್ ಭಾಸ್ಕರ ಗೌಡ ಇದ್ದರು. ಕಂದಾಯ ನಿರೀಕ್ಷಕ ನವೀನ್ ಸ್ವಾಗತಿಸಿ, ಕಂದಾಯ ನಿರೀಕ್ಷಕ ರಾಮ ಕೆ ವಂದಿಸಿದರು. ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತ್ರೋಬಾಲ್ ಮತ್ತು ಕ್ರಿಕೆಟ್ ಕೂಟಗಳು ನಡೆದವು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ