ನಮ್ಮೂರು

ಹೋಟೆಲ್ ಸಿಲ್ವರ್ ನಲ್ಲೀಗ ಘಮಘಮಿಸುವ ‘ಚಾಟ್ಸ್’ ಲಭ್ಯ

 

ಶುಚಿ, ರುಚಿ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಗುಣಮಟ್ಟದ ಆಹಾರಗಳನ್ನು ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಒದಗಿಸುವ ಮೂಲಕ ಹಾಗೂ ಮನೆಬಾಗಿಲಿಗೇ ಫ್ಯಾಮಿಲಿ ಪ್ಯಾಕ್ ಗಳನ್ನು ಒದಗಿಸುವ ಮೂಲಕ ಎರಡು ವರ್ಷಗಳಲ್ಲಿ ಬಂಟ್ವಾಳ, ಬಿ.ಸಿ.ರೋಡ್ ಪರಿಸರದ ಜನರ ಮನಗೆದ್ದ ಬಿ.ಸಿ.ರೋಡ್ ಕೈಕುಂಜೆಯ ಮೆಸ್ಕಾಂ ಕಚೇರಿ ಬಳಿ ಇರುವ ಸಿಲ್ವರ್ ಫ್ಯಾಮಿಲಿ ರೆಸ್ಟಾರೆಂಟ್ ನಲ್ಲಿ ಹೊಸ ಸೇರ್ಪಡೆ – ಮುಂಬೈ ಶೈಲಿಯ ಚಾಟ್ ತಿನಿಸುಗಳು.

ಸಾಂಪ್ರದಾಯಿಕ ತಿನಿಸುಗಳಲ್ಲದೆ ಬಾಯಲ್ಲಿ ನೀರೂರಿಸುವ ಬೇಲ್ ಪುರಿ, ಸೇವ್ ಪುರಿ, ಪಾನೀಪುರಿ, ಮಸಾಲಾಪುರಿಗಳನ್ನು ತಯಾರಿಸುವ ಅನುಭವಿಗಳೊಂದಿಗೆ ಈಗಾಗಲೇ ಕೌಂಟರ್ ಸಿದ್ಧಗೊಂಡಿದ್ದು, ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಇಲ್ಲಿ ಸೇವೆಗೆ ಲಭ್ಯವಾಗಿದೆ. ರುಚಿರುಚಿಯಾದ ಪಾವ್ ಬಾಜಿ, ಬೇಸಗೆಯ ದಣಿವಾರಿಸಲು ತಾಜಾ ಹಣ್ಣಿನ ರಸ ಇವುಗಳೊಂದಿಗೆ ಸೇರ್ಪಡೆಗೊಂಡಿದೆ. ಇನ್ನು ಸಿಲ್ವರ್ ರೆಸ್ಟೋರೆಂಟ್ ನಲ್ಲಿ ಫ್ರೆಶ್ ಫ್ರುಟ್ ಜ್ಯೂಸ್ ಕುಡಿಯುತ್ತಾ, ಪಾವ್ ಬಾಜಿ ಸವಿಯಬಹುದು, ಬೇಲ್ ಪುರಿ, ಮಸಾಲಾಪುರಿಯ ಸ್ವಾದ ಅಳೆಯಬಹುದು..

ಶುಚಿ ರುಚಿಯಾದ ಉತ್ತರ, ದಕ್ಷಿಣ ಮತ್ತು ಚೈನೀಸ್ ಶೈಲಿಯ ತಿನಿಸುಗಳು, ಐಸ್ ಕ್ರೀಮ್.. ಹೀಗೆ ಗ್ರಾಹಕರ ಮನಗೆಲ್ಲುವ ಆಯ್ಕೆಗಳನ್ನು ಒದಗಿಸುತ್ತಿರುವ ಸಿಲ್ವರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಈಗಾಗಲೇ ದೊರಕುವ ಮನೆಗೆ ತಕ್ಷಣ  ನೆಂಟರಿಷ್ಟರು ಬಂದಾಗ ಒದಗಿಸುವ ಫ್ಯಾಮಿಲಿ ಪ್ಯಾಕ್ 999 ಮತ್ತು 749 ರೂ ಗಳ ಸೇವೆಗೆ ಉತ್ತಮ ಸ್ಪಂದನೆ ದೊರಕಿದೆ ಎನ್ನುತ್ತಾರೆ ರೆಸ್ಟೋರೆಂಟ್ ಮಾಲೀಕ ವಿಶ್ವನಾಥ್ ಬಂಟ್ವಾಳ್. ಹೆಚ್ಚಿನ ಮಾಹಿತಿಗೆ 8762527931 ಸಂಪರ್ಕಿಸಬಹುದು. 

for more details about silver family restaurant contact:  8762527931

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts