ನವೆಂಬರ್ ತಿಂಗಳಲ್ಲಿ ವಿರಳವಾಗಿ ಕಾಣಿಸುವ ಮಳೆ ಇನ್ನೂ ಮುಂದುವರಿದಿದೆ. ಭಾನುವಾರ ಬೆಳಗ್ಗೆ ರಿಯಾಯಿತಿ ತೋರಿದ್ದ ಮಳೆ, ರಾತ್ರಿ ಸುಮಾರು 9 ಗಂಟೆ ಬಳಿಕ ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿದೆ. ಬಂಟ್ವಾಳದಲ್ಲಿ ರಾತ್ರಿ ಗುಡುಗು ಸಹಿತ ಮಳೆಯಾಗುತ್ತಿದೆ. ತಾಲೂಕಿನ ಕೆಲ ಭಾಗಗಳಲ್ಲಿಯೂ ಗುಡುಗಿನ ಸದ್ದು ಭಾನುವಾರ ರಾತ್ರಿ ಕೇಳಿಸುತ್ತಿದ್ದು, ಮತ್ತೆ ರೈತರು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಶುಭ ಸಮಾರಂಭಗಳ ಸೀಸನ್ ಆರಂಭಗೊಂಡಿದ್ದು, ಭಾನುವಾರ ಹಲವು ಶುಭ ಕಾರ್ಯಗಳು ಸಂಪನ್ನಗೊಂಡಿದ್ದವು. ಕೆಲವು ದಿನಗಳಲ್ಲಿ ಯಕ್ಷಗಾನ ಮೇಳಗಳ ತಿರುಗಾಟವೂ ಆರಂಭಗೊಳ್ಳಲಿದ್ದು, ಆ ಸಂದರ್ಭವೂ ಮಳೆಯಾಗುವ ಆತಂಕವನ್ನು ತಳ್ಳಿಹಾಕುವಂತಿಲ್ಲ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…