ಪಡಿತರ ಚೀಟಿ ಅನರ್ಹವಿದ್ದರೆ ರದ್ಧತಿಗೆ ಸಂಬಂಧಪಟ್ಟಂತೆ ದಂಡ ವಸೂಲು ಮಾಡುವ ಕ್ರಮದ ಪರಿಶಿಲನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಸಿಎಂ ಜೊತೆ ಚರ್ಚೆ ನಡೆಸುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬಂಟ್ವಾಳಕ್ಕೆ ಸಚಿವರು ಶನಿವಾರ ಶಾಸಕರ ಕಚೇರಿಗೆ ಭೇಟಿ ನೀಡಿದ್ದು, ಈ ಸಂದರ್ಭ, ಅನರ್ಹ ಪಡಿತರ ಚೀಟಿ ರದ್ದತಿಗೆ ದಂಡ ವಸೂಲಾತಿ ಕೈಬಿಡುವಂತೆ ಬಂಟ್ವಾಳ ಶಾಸಕ ನಾಯ್ಕ್ ಒತ್ತಾಯಿಸಿದರು. ಇಲಾಖೆಯ ಈ ಕ್ರಮದಿಂದ ಬಡವರ್ಗದ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಅವರಲ್ಲಿ ಮಾತುಕತೆ ನಡೆಸಿ ದಂಡ ವಸೂಲಾತಿಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರೊಂದಿಗೆ ವಿಷಯದ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು. ದಂಡ ವಸೂಲಾತಿಯ ಬಗ್ಗೆ ಸರಕಾರದಿಂದ ನೀಡಲಾದ ಆದೇಶ-ಸುತ್ತೋಲೆ ತಕ್ಷಣ ತನಗೆ ಕಳುಹಿಸಿಕೊಡುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
www.bantwalnews.com Editor: Harish Mambady For Advertisements Contact: 9448548127