ಮಣಿಪಾಲದ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಮಣಿಪಾಲದಲ್ಲಿ ನಡೆದ ಪೋಟೊಗ್ರಾಫಿ ಹಾಗೂ ವಿಡಿಯೋಗ್ರಾಫಿಯ ಒಂದು ತಿಂಗಳ ತರಬೇತಿ ಕಾರ್ಯಗಾರದ ಬಳಿಕ ಶಿಬಿರಾರ್ಥಿಗಳಿಗೆ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಶಿಬಿರಾರ್ಥಿ, ಬಿ.ಸಿ.ರೋಡಿನ ಛಾಯಾಚಿತ್ರಗ್ರಾಹಕ ದೀಪಕ್ ಸಾಲ್ಯಾನ್ ಅವರ ಛಾಯಾಚಿತ್ರ ಮೊದಲ ಬಹುಮಾನ ಪಡೆದಿದೆ. ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್ ಅವರು ತೀರ್ಪುಗಾರರಾಗಿ ಭಾಗವಹಿಸಿ ಬಹುಮಾನ ವಿತರಿಸಿದರು. ಈ ಸಂದರ್ಭ ಸಂಸ್ಥೆಯ ನಿರ್ದೇಶಕ ಮಂಜುನಾಥ್ ನಾಯಕ್, ಫ್ಯಾಕಲ್ಟಿ ಶ್ರೇಯಾ ಉಪಸ್ಥಿತರಿದ್ದರು
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)