ಸರ್ಕಾರಿ ಕಚೇರಿ

ಅಂಗೈನಲ್ಲೇ ಮಾಡಬಹುದು ಮತದಾರ ಪಟ್ಟಿ ಪರಿಶೀಲನೆ

ವಿಶೇಷ ಪರಿಷ್ಕರಣೆ 2020, ಮತದಾರರ ಪಾಲ್ಗೊಳ್ಳುವಿಕೆ ಕಡ್ಡಾಯ

ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಈಗಾಗಲೇ ಆರಂಭಗೊಂಡಿದ್ದು, ಬಂಟ್ವಾಳ ತಾಲೂಕಿನ ಸುಮಾರು 3 ಲಕ್ಷ ಮತದಾರರ ಪೈಕಿ ಕೇವಲ 2500ರಷ್ಟು ಇದಕ್ಕೆ ಸ್ಪಂದಿಸಿದ್ದಾರೆ. ಮೊಬೈಲ್ ಮೂಲಕವೂ ಪರಿಷ್ಕರಣೆ ಸಾಧ್ಯ, ಇದಕ್ಕೆ ಕ್ಯೂ ನಿಲ್ಲಬೇಕಿಲ್ಲ.

ಜಾಹೀರಾತು

ಅ. 15ರವರೆಗೆ ಮಾತ್ರ ಅವಕಾಶವಿದ್ದು, ಅದರೊಳಗೆ ಎಲ್ಲಾ ಮತದಾರರು ಪರಿಷ್ಕರಣೆ ನಡೆಸಬೇಕಿದೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಮನವಿ ಮಾಡಿದ್ದಾರೆ.

ಏನಿದು ಪರಿಷ್ಕರಣೆ: ರಾಜ್ಯ ಚುನಾವಣಾ ಆಯೋಗವು ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-೨೦೨೦ರಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮವನ್ನು ಆರಂಭಿಸಿದೆ. ಎಲ್ಲ ಮತದಾರರು ಕಡ್ಡಾಯವಾಗಿ ಪರಿಶೀಲನೆ ಮಾಡುವುದು ಅಗತ್ಯ ಈ
ಕುರಿತು ಸಾಕಷ್ಟು ಮಂದಿಗೆ ಮಾಹಿತಿ ಕೊರತೆಯಿದ್ದು, ನಾವು ಆ ಕಾರ್ಯವನ್ನು ಮಾಡಬೇಕಿಲ್ಲ ಎಂದು ಸಾಕಷ್ಟು ಮಂದಿ ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಮತದಾನದ ಹಕ್ಕಿರುವ ಪ್ರತಿಯೊಬ್ಬರೂ ಪರಿಷ್ಕರಣೆಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ.

ಜಾಹೀರಾತು

ಮತದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ತಮ್ಮ ಮೊಬೈಲ್ ಮೂಲಕವೂ ಪರಿಷ್ಕರಣೆಗೆ ಆಯೋಗವು ಅವಕಾಶ ನೀಡಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಓಟರ್ ಹೆಲ್ಪ್‌ಲೈನ್ ಆಪ್ ಡೌನ್‌ಲೋಡ್ ಮಾಡಿಕೊಂಡು, ಬಳಿಕ ಅದರಲ್ಲಿ ಇವಿಪಿಯನ್ನು ಆಯ್ಕೆ ಮಾಡಿ ಮುಂದುವರಿಯಬೇಕಿದೆ.

ಮತದಾರರು ಪರಿಷ್ಕರಣೆ ನಡೆಸುವ ವೇಳೆ ಮೊಬಲ್ ಸಂಖ್ಯೆಗೆ ಒಟಿಪಿ ಬರುತ್ತಿದ್ದು, ಅದನ್ನು ದಾಖಲಿಸಿ ಮುಂದುವರಿಯಬಹುದಾಗಿದೆ. ಇದರಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವುದಕ್ಕೂ ಅವಕಾಶವಿದ್ದು, ಮತದಾರರ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಮತದಾರರಿಗೆ ಆಯೋಗವು ಒಂದು ಸರ್ಟಿಫಿಕೇಟನ್ನು ಕೂಡ ಆಪ್‌ನ ಮೂಲಕವೇ ನೀಡುತ್ತದೆ.

ಒಂದು ಮೊಬಲ್‌ನ ಮೂಲಕ ಡೌನ್‌ಲೋಡ್ ಮಾಡಿದ ಆಪ್ ಮೂಲಕ ಇತರ ಮತದಾರರು ಕೂಡ ತಮ್ಮ ಮೊಬೈಲ್ ಸಂಖ್ಯೆ ದಾಖಲಿಸಿ ಪರಿಷ್ಕರಣೆ ನಡೆಸಲು ಅವಕಾಶವಿದೆ. ಪ್ರಸ್ತುತ ಸರಳ ರೀತಿಯಲ್ಲಿ ಪರಿಷ್ಕರಣೆಗೆ ಅವಕಾಶವಿದ್ದು, ಹೀಗಾಗಿ ಈಗಲೇ ಪ್ರತಿಯೊಬ್ಬ ಮತದಾರರೂ ಪರಿಷ್ಕರಣೆ ನಡೆಸಬೇಕಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಜಾಹೀರಾತು

www.bantwalnews.com Editor: Harish Mambady For Advertisements Contact: 9448548127

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ