ವಿಟ್ಲ

ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ ಒಡಿಯೂರು ಶ್ರೀಹನುಮಗಂಗಾ ಪುಷ್ಕರಿಣಿ

www.bantwalnews.com Editor: Harish Mambady

For Advertisements Contact: 9448548127

ಒಡಿಯೂರು ಶ್ರೀಗಳವರ ದಿವ್ಯ ಕಲ್ಪನಾಶಕ್ತಿಯ ಅನಾವರಣವಾಗಿ ಶ್ರೀ ಸಂಸ್ಥಾನದಲ್ಲಿ ನಿರ್ಮಾಣಗೊಂಡಿರುವಶ್ರೀಹನುಮಗಂಗಾ ಪುಷ್ಕರಿಣಿ. 2, ಶ್ರೀ ಲಲಿತಾ ಪಂಚಮಿ ಮಹೋತ್ಸವದಂದು ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ.

ಒಡಿಯೂರು ಶ್ರೀ ದತ್ತಾಂಜನೇಯ ದೇಗುಲದ ವಿಶೇಷ ಆಕರ್ಷಣೆಯಾಗಿರುವ ಶ್ರೀಹನುಮಗಂಗಾ ಪುಷ್ಕರಿಣಿ ಕಲಾತ್ಮಕವಾಗಿ ಮೂಡಿಬಂದಿದೆ. ನಿತ್ಯ ಹರಿದ್ವರ್ಣದ ರಮಣೀಯ ವನಸಿರಿ ಕಲೆಂಜಿಮಲೆಯ ಹಿನ್ನಲೆಯಲ್ಲಿ ಅಪ್ಯಾಯಮಾನವಾದ ಕಲ್ಪವೃಕ್ಷಗಳ ಮಧ್ಯದ ಪುಷ್ಕರಿಣಿಯ ಉತ್ತರಭಾಗದಲ್ಲಿ ನಿರ್ಮಿಸಿದ ವಿಶಿಷ್ಟ ಶಿಲ್ಪಕೃತಿಯಲ್ಲಿ ಶ್ರೀ ದತ್ತಗುರು ಮತ್ತು ಶ್ರೀ ಆಂಜನೇಯನ ಬಿಂಬ ದಿವ್ಯ ತೇಜಸ್ಸಿನಿಂದ ಆಕರ್ಷಿಸುತ್ತಿದೆ. ಸಮೀಪದಲ್ಲಿರುವ ಕಾಮಧೇನು, ಹನುಮ, ನವಿಲು ಮೂರ್ತಿಗಳಿಗೆ ಪ್ರಾಕೃತಿಕವಾದ ಆಕರ್ಷಣೆ ಇದೆ. ಸುಂದರ ಶಿಲ್ಪರಚನೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಪೂರ್ವದಲ್ಲಿ ಹನುಮ, ಪಶ್ಚಿಮದಲ್ಲಿ ಗರುಡ ಆಕೃತಿ, ಮಧ್ಯದಲ್ಲಿ ಗಣಪತಿ ಮೂಡಿದೆ.

ಶ್ರೀ ಸಂಸ್ಥಾನದಲ್ಲಿ ಸುಂದರವಾಗಿ ನಿರ್ಮಿಸಿನಿತ್ಯಾನಂದ ಗುಹೆಯಲ್ಲಿಯ ಪುಟ್ಟ ಜಲಾಶಯದಲ್ಲಿ ಆಗ್ನೇಯ ಭಾಗದಲ್ಲಿರುವಹನುಮಗಂಗೆಒರತೆ ನೇರವಾಗಿ ಶ್ರೀಹನುಮಗಂಗಾ ಪುಷ್ಕರಿಣಿಗೆ ಗೋಮುಖದ ಮೂಲಕ ಸೇರುತ್ತದೆ.

ಶ್ರೀ ಲಲಿತಾ ಪಂಚಮಿ ಮಹೋತ್ಸವ: ಶ್ರೀ ಚಂಡಿಕಾ ಮಹಾಯಾಗ: .2ರಂದು ಶ್ರೀ ಸಂಸ್ಥಾನದಲ್ಲಿ ವಿವಿಧ ಧಾರ್ಮಿಕಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಲಲಿತಾ ಪಂಚಮಿ ಮಹೋತ್ಸವ ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾ ಮಹಾಯಾಗವು ಜರಗಲಿದ್ದು, ಪೂರ್ವಾಹ್ಣ ದೀಪಾರಾಧನೆ, .೩೦ಕ್ಕೆ ಶ್ರೀ ಚಂಡಿಕಾ ಮಹಾಯಾಗ ಆರಂಭಗೊಳ್ಳಲಿದೆ. ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ ೧೦ ಗಂಟೆಗೆ ನಡೆಯಲಿದ್ದು ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿರುವರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ನಂದಿನಿ ಶೆಟ್ಟಿ, ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

      ಸಮಾರಂಭದಲ್ಲಿ ವಿದುಷಿ ಸಾವಿತ್ರಿ ಈಶ್ವರ ಭಟ್ ಅಮೈ, ಚಿತ್ರನಟ, ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ, ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು, ತುಳು ನಾಟಕ ರಚನೆಗಾರ, ನಿರ್ದೇಶಕ, ನಿರ್ಮಾಪಕ ಕೃಷ್ಣ ಜಿ. ಮಂಜೇಶ್ವರ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ, ಅಬ್ಬಕ್ಕ ಟಿ.ವಿ. ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತಬೈಲ್ ಇವರಿಗೆ ಶ್ರಿ ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಲಾಗುವುದು. ಮಧ್ಯಾಹ್ನ ಶ್ರೀ ಚಂಡಿಕಾ ಮಹಾಯಾಗದ ಪುರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ ನಡೆಯಲಿದ್ದು, ಗಂಟೆಗೆ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿಚಂದ್ರಾವಳಿ ವಿಲಾಸಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

      ಸಂಜೆ ಗಂಟೆಗೆ ಸಾರ್ವಜನಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಲಿದೆ.

 

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ