ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದ ದರ್ಪಣ ತೀರ್ಥ ನದಿ ಸೋಮವಾರ ಉಕ್ಕಿ ಹರಿಯಲಾರಂಭಿಸಿತು.
ಕುಮಾರ ಪರ್ವತದಿಂದ ಹರಿದು ಬರುತ್ತಿರುವ ಈ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು,ಆದಿ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿತು. ರಥಬೀದಿಯ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರಹ್ಮಣ್ಯ ದಿಂದ ಆದಿ ಸುಬ್ರಹ್ಮಣ್ಯ ಸಂಪರ್ಕಿಸುವ ಕಿರು ಸೇತುವೆಯೂ ಮುಳುಗಡೆಯಾಯಿತು. ನದಿ ತೀರದ ಕೃಷಿ ಭೂಮಿಗಳೂ ಮುಳುಗಡೆಯಾಗಿದೆ. ಅಲ್ಲದೆ ದರ್ಪಣ ತೀರ್ಥ ನದಿ ಪಾತ್ರದಲ್ಲಿರುವ ಮನೆಗಳು ಹಾಗೂ ಕೆಲವು ವಸತಿ ಗೃಹಗಳಿಗೂ ನೀರು ನುಗ್ಗಿತ್ತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…