ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ 19ನೇ ವರ್ಷದ ನವದಂಪತಿ ಸಮಾವೇಶದಲ್ಲಿ 119 ಜೋಡಿ ನವದಂಪತಿ ಪಾಲ್ಗೊಂಡರು. ಹಿರಿಯ ದಂಪತಿಗಳಾದ ಪ್ರೊ.ಬಾಲಕೃಷ್ಣ ಕಲ್ಲೂರಾಯ ಹಾಗೂ ಮೀನಾಕ್ಷಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಮದುವೆಗೆ ಅದರದ್ದೇ ಆದ ಸ್ವರೂಪವಿದೆ, ಪ್ರಾಶಸ್ತ್ಯವಿದೆ. ಮದುವೆಯು ಒಂದು ಪವಿತ್ರವಾದ ಸಂಬಂಧ. ಧರ್ಮದ ಆಧಾರದಲ್ಲಿ ಮುಂದಿನ ಪೀಳಿಗೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿರುತ್ತದೆ ಎಂದರು.
ಜ್ಯೇಷ್ಠ ಪ್ರಚಾರಕರು, ಕುಟುಂಬ ಪ್ರಬೋಧನ್ ಸಹಸಂಯೋಜಕ ಸು.ರಾಮಣ್ಣ ಮಾತನಾಡಿ,ಮಾರ್ಗದರ್ಶನ ನೀಡಿ ಸಮಾರೋಪದ ಮಾತುಗಳನ್ನಾಡಿದರು.
ಹಿರಿಯ ದಂಪತಿಯಾಗಿ ಆಗಮಿಸಿದ ಪ್ರೊ.ಬಾಲಕೃಷ್ಣ ಕಲ್ಲೂರಾಯ ಹಾಗೂ ಮೀನಾಕ್ಷಿ ನವದಂಪತಿಗೆ ಜೀವನಾನುಭವ ತಿಳಿಸಿಕೊಟ್ಟರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ದಂಪತಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಹಾಗೂ ಸಹಸಂಚಾಲಕ ರಮೇಶ್ ಉಪಸ್ಥಿತರಿದ್ದರು. ಡಾ. ಕಮಲಾ ಪ್ರಭಾಕರ ಭಟ್, ಎಲ್ಲಾ ವಿಭಾಗದ ಪ್ರಮುಖರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಉಪಸ್ಥಿತರಿದ್ದರು. ರಶ್ಮಿತಾ ಪ್ರಾರ್ಥನೆ ಮಾಡಿ, ಸುಧಾ ಭಟ್ ಸ್ವಾಗತಿಸಿದರು, ಶುಭಲಕ್ಷ್ಮಿ ಸತೀಶ್ ಧನ್ಯವಾದಗೈದರು. ಸ್ವಾತಿ ಕೃಷ್ಣಪ್ಪ ನಿರ್ವಹಿಸಿದರು.