ಬಂಟ್ವಾಳ: ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ಅಂತರ್ಕಾಲೇಜು ಮಟ್ಟದ ಪ್ರತಿಭಾ ಸ್ಪರ್ಧೆ ವಿಕಾಸ್ 2019ರಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ ದೊರಕಿದೆ.
ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಪ್ರಶಸ್ತಿ ವಿತರಿಸಿ, ಸಮಾರೋಪದ ಮಾತುಗಳನ್ನಾಡಿದರು.
ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಶಶಿಕಲಾ ಕೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು. ದ.ಕ. ಜಿಲ್ಲೆಯಿಂದ 25 ಪದವಿ ಪೂರ್ವ ಕಾಲೇಜುಗಳ ತಂಡಗಳು ಭಾಗವಹಿಸಿದವು. ಬಹುಮಾನಿತರ ಪಟ್ಟಿಯನ್ನು ಗಣಿತಶಾಸ್ತ್ರ ಉಪನ್ಯಾಸಕಿ ಕವಿತಾ ಯಾದವ್ ವಾಚಿಸಿದರು.ಸಂಖ್ಯಾಶಾಸ್ತ್ರ ಉಪನ್ಯಾಸಕ ಶಿವಪ್ರಸಾದ್ ಸ್ವಾಗತಿಸಿದರು. ಸಸ್ಯಶಾಸ್ತ್ರ ಉಪನ್ಯಾಸಕಿ ಚೈತ್ರಾ ಆರ್ ವಂದಿಸಿದರು.ಆಂಗ್ಲಭಾಷಾ ಉಪನ್ಯಾಸಕಿ ಪ್ರಭಾವತಿ ಎಸ್. ಕಾರ್ಯಕ್ರಮ ನಿರೂಪಿಸಿದರು
ವಿವಿಧ ಸ್ಪರ್ಧೆಗಳ ಫಲಿತಾಂಶ ವಿವರ ಹೀಗಿದೆ. ಭಾಷಣ ಸ್ಪರ್ಧೆ: ಅರಂತೋಡು ಎನ್.ಎಂ. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಣಶ್ರೀ ಪ್ರಥಮ, ಮೂಡಬಿದ್ರೆ ಶ್ರಿ ಮಹಾವೀರ ಪ.ಪೂ. ಕಾಲೇಜು ವಿದ್ಯಾರ್ಥಿ ಹೆನ್ವಿಲ್ ಎನ್ಸನ್ ವಾಲ್ಡರ್ ದ್ವಿತೀಯ ಸ್ಥಾನ.
ಆಶುಭಾಷಣ: ಮಂಗಳೂರು ಶಾರದಾ ಪ.ಪೂ ಕಾಲೇಜು ವಿದ್ಯಾರ್ಥಿ ಸರಸ್ವತಿ ಎನ್ ಪ್ರಥಮ, ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜು ವಿದ್ಯಾರ್ಥಿ ಮೃದುಲಾ ದ್ವಿತೀಯ ಸ್ಥಾನ.
ಚಿತ್ರಕವನ ರಚನೆ: ಪುತ್ತೂರು ಸೈಂಟ್ ಫಿಲೋಮೀನಾ ಪ.ಪೂ. ಕಾಲೇಜು ವಿದ್ಯಾರ್ಥಿ ಅರ್ಪಿತಾ ಕೆ. ಪ್ರಥಮ, ಮಂಗಳೂರು-ಅತ್ತಾವರ ಸರೋಜಿನಿ ಮಧುಸೂದನ್ ಕುಶೆ ಪ.ಪೂ. ಕಾಲೇಜು ವಿದ್ಯಾರ್ಥಿ ಹರ್ಷಪ್ರಭಾ ದ್ವಿತೀಯ ಸ್ಥಾನ.
ಚಿತ್ರಕಲೆ: ಪುತ್ತೂರು ಸೈಂಟ್ ಫಿಲೋಮೀನಾ ಪ.ಪೂ. ಕಾಲೇಜು ವಿದ್ಯಾರ್ಥಿ ದೀಪಕ್ ಆಚಾರ್ಯ ಪ್ರಥಮ, ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜು ವಿದ್ಯಾರ್ಥಿ ಸುಹಾಸ್ ಕೆ.ಸಿ. ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಜನಪದ ಗೀತೆ: ಮಂಗಳೂರು ಕೆನರಾ ಪ.ಪೂ. ಕಾಲೇಜು ವಿದ್ಯಾರ್ಥಿ ಸುಧೀಕ್ಷಾ ಪ್ರಥಮ, ಉಜಿರೆ ಎಸ್.ಡಿ.ಎಂ ಪ.ಪೂ. ಕಾಲೇಜು ವಿದ್ಯಾರ್ಥಿ ಸಾನಿಯಾ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
ಕಿರುಪ್ರಹಸನ: ಪುತ್ತೂರು ವಿವೇಕಾನಂದ ಪ.ಪೂ. ಕಾಲೇಜಿನ ತಂಡ ಪ್ರಥಮ , ಎಸ್.ಡಿ.ಎಂ ಪ.ಪೂ. ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.
ರಸಪ್ರಶ್ನೆ: ಬೆಳ್ತಂಗಡಿ ವಾಣಿ ಇಂಡಿಪೆಂಡೆಂಟ್ ಪ.ಪೂ. ಕಾಲೇಜು ಪ್ರಥಮ ಮತ್ತು ಪುತ್ತೂರು ಸೈಂಟ್ ಫಿಲೋಮೋನಾ ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಗಳಿಸಿದೆ. .