ಮಂಗಳೂರು: ಇಲ್ಲಿನ ಫೋರಂ ಫಿಜಾ ಮಾಲ್ ನಲ್ಲಿ ಮಂಗಳೂರು ಶಕ್ತಿನಗರದ ಅರಿವು ವಿಶೇಷ ಮಕ್ಕಳ ತರಬೇತಿ ಕೇಂದ್ರ ಹಾಗೂ ಹಕುನಾ ಮಟಾಟ ಸಂಸ್ಥೆಯ ಆಯೋಜನೆಯಲ್ಲಿ ಸ್ವಾತಂತ್ರ್ಯ ಸಂಭ್ರಮ ಮತ್ತು ಮಕ್ಕಳ ಕೃಷ್ಣವೇಷ ಕಾರ್ಯಕ್ರಮ ನಡೆಯಿತು.
ಮನಪಾ ಮಾಜಿ ಮೇಯರ್ ಶಕೀಲಾ ಕಾವಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಡಾ. ಭರತ್ ಶೆಟ್ಟಿ ಆಗಮಿಸಿ, ಮಕ್ಕಳ ಕಾರ್ಯಕ್ರಮ ವೀಕ್ಷಿಸಿ ಶುಭ ಹಾರೈಸಿದರು. ಡಾ. ಕುಸುಂ ಡಿಸ, ಅರಿವು ಸಂಸ್ಥೆ ನಿರ್ದೇಶಕಿ ಪೂರ್ಣಿಮಾ ಭಟ್, ಹಕುನಾ ಮಟಾಟದ ಸಂಚಾಲಕಿ ಅಂಜನಾ ಕಾಮತ್, ಶ್ರೀಪ್ರಸಾದ್, ಕಲಾ ದೀಪಕ್ ಉಪಸ್ಥಿತರಿದ್ದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)