ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ 24ರಂದು ನಡೆಯಲಿದೆ.
ಬೆಳಗ್ಗಿನಿಂದ ರಂಗೋಲಿ ಸ್ಪರ್ಧೆ, ತೆಂಗಿನಕಾಯಿ ಹೊಡೆಯುವ ಸ್ಪರ್ಧೆ, ಆಟೋಟ ಸ್ಪರ್ಧೆಗಳು, ಅಡಕೆ ಮರ ಹತ್ತುವುದು, ಮಡಕೆ ಒಡೆಯುವುದು, ಗುಂಡೆಸೆತ, ಹಗ್ಗಜಗ್ಗಾಟ ಸಹಿತ ಹಲವು ಸ್ಪರ್ಧೆಗಳು ಸಾರ್ವಜನಿಕರಿಗೆ, ಮಹಿಳೆಯರಿಗೆ, ಹುಡುಗ, ಹುಡುಗಿಯರಿಗೆ ನಡೆಯಲಿದೆ. ಬೆಳಗ್ಗೆ 11ರಿಂದ ಶ್ರೀಕೃಷ್ಣಚಿತ್ರ ಬಿಡಿಸುವ ಸ್ಪರ್ಧೆ 3ರಿಂದ 7, 8ರಿಂದ 10ನೇ ತರಗತಿಯ ಮಕ್ಕಳಿಗೆ ನಡೆಯುವುದು. ಸಂಜೆ ಸಂಗೀತ ಸ್ಪರ್ಧೆ ಮತ್ತು ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ ಇರಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷೆ ಶಿವಾನಿ ಆರ್. ಬಾಳಿಗಾ, ಮತ್ತು ತಹಶೀಲ್ದಾರ್ ರಶ್ಮಿ ಎಸ್.ಆರ್. ಭಾಗವಹಿಸಲಿದ್ದಾರೆ ಎಂದು ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ ತಿಳಿಸಿದ್ದಾರೆ.
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸಂಪರ್ಕ ಸಂಖ್ಯೆ: 9448548127
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…