ವಿಡಿಯೋ ಪ್ರಸ್ತುತಿ: ಶಕ್ತಿಪ್ರಸಾದ್ ಅಭ್ಯಂಕರ್, ಜ್ಯೇಷ್ಠ ಸ್ಟುಡಿಯೋ, ಬಿ.ಸಿ.ರೋಡ್

www.bantwalnews.com Editor: Harish Mambady

ಜಾಹೀರಾತು

ಫೊಟೋ ಎಲ್ಲವನ್ನೂ ಹೇಳುತ್ತದೆ. ಚಿತ್ರಕೃಪೆ: ಅಪುಲ್ ಆಳ್ವಾ ಇರಾ.

ಕೊಡಗಿನಲ್ಲಿ ಕಳೆದ ವರ್ಷ ಆದ ದುರಂತದ ಸ್ಥಿತಿಯೇ ಇಂದು ಚಾರ್ಮಾಡಿ ತಪ್ಪಲಲ್ಲಾಗಿದೆ. ಬೆಳ್ತಂಗಡಿ ತಾಲೂಕಿನ ಬಹುತೇಕ ಗ್ರಾಮಗಳ ಜನರು ಮುಂದೇನು ಮಾಡುವುದು ಎಂಬ ಸ್ಥಿತಿಯಲ್ಲಿದ್ದಾರೆ. ಕಣ್ಣೆದುರೇ ಮನೆ ಕುಸಿಯುವುದು, ತೋಟ ನಾಶವಾಗುವುದು, ರಾತ್ರಿ ಬೆಳಗಾಗುವುದರೊಳಗೆ ಬೀದಿಪಾಲಾಗುವ ಸ್ಥಿತಿ ಯಾರಿಗೂ ಬರಬಾರದು. ಇಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ತಹಶೀಲ್ದಾರ್ ಗಣಪತಿ ಶಾಸ್ತ್ರೀ, ತಾಲೂಕಾಡಳಿತ, ಜನಪ್ರತಿನಿಧಿಗಳು ರಾತ್ರಿ ಹಗಲೆನ್ನದೆ ಸಂಕಷ್ಟಕ್ಕೊಳಗಾದವರಿಗೆ ನೆರವಾಗಲು ಶ್ರಮಿಸುತ್ತಿದ್ದಾರೆ. ಸರಕಾರದಿಂದ ಪರಿಹಾರವೂ ದೊರಕುತ್ತದೆ. ಆದರೆ ಉಳಿದಿರುವ ಪ್ರಶ್ನೆ ಇಷ್ಟೇ. ಮೊದಲಿನಂತೆ ಬದುಕಲು ಮತ್ತೆ ಸಾಧ್ಯವೇ? ಮನೆ ಕಟ್ಟಿ ಕುಳಿತುಕೊಳ್ಳಬಹುದು, ಕೃಷಿಯನ್ನಷ್ಟೇ ಮಾಡಿ ಗೊತ್ತಿದ್ದವರು ಮತ್ತೆ ಅದನ್ನೇ ಮಾಡಬೇಕಷ್ಟೇ ಹೊರತು, ಬೇರೆ ಉದ್ಯೋಗವನ್ನು ಅವಲಂಬಿಸಲು ಹೊರಡುವುದು ಅಷ್ಟು ಸುಲಭವೇನಲ್ಲ. ಮಕ್ಕಳ ಭವಿಷ್ಯ, ಅನಾರೋಗ್ಯಪೀಡಿತರ ಸಮಸ್ಯೆ, ವೃದ್ಧರು, ಹೆಣ್ಣುಮಕ್ಕಳ ಆಶ್ರಯವಷ್ಟೇ ಅಲ್ಲ, ಅವರು ಮೊದಲಿನಂತೆ ಸ್ವಾಭಿಮಾನಿಯಾಗಿ ನೆಲೆಯೂರುವಂತೆ ಮಾಡಲು ನಾಗರಿಕ ಸಮಾಜವೆಲ್ಲಾ ಕೈಜೋಡಿಸುವುದು ಇಂದಿನ ಅವಶ್ಯಕತೆಯು ಹೌದು.

ಚಾರ್ಮಾಡಿ ತಪ್ಪಲಿಗೆ ಬಂಟ್ವಾಳದ ಛಾಯಾಗ್ರಾಹಕ, ಜ್ಯೇಷ್ಠ ಸ್ಟುಡಿಯೋ ಮಾಲೀಕ ಮತ್ತು ಹವ್ಯಾಸಿ ಕಲಾವಿದ ಶಕ್ತಿಪ್ರಸಾದ್ ಅಭ್ಯಂಕರ್ ಮತ್ತು ತಂಡ ಭೇಟಿ ನೀಡಿ ಅಧ್ಯಯನ ನಡೆಸಿದೆ. ವಿವಿಧ ಪ್ರದೇಶಗಳ ಜನರ ಸಂಕಷ್ಟಗಳನ್ನು ಆಲಿಸಿ, ಅದನ್ನು ದಾಖಲೀಕರಿಸಿ, ಜನರ ಮುಂದಿಡುವ ಪ್ರಯತ್ನ ಮಾಡಿದೆ. ಇದರ ಮೊದಲ ಕಂತುಗಳು ಇಲ್ಲಿವೆ. ಈ ವಿಡಿಯೋ ಎಲ್ಲವನ್ನೂ ಹೇಳಲು ಪ್ರಯತ್ನಿಸುತ್ತದೆ. 

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ