ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರ ರಾತ್ರಿಯೂ ಮುಂದುವರಿದಿದ್ದು, ಬಂಟ್ವಾಳ ತಾಲೂಕಿನ ಹಲವು ಮನೆಗಳು, ಅಂಗಡಿ ಮುಂಗಟ್ಟು, ಪ್ರಾರ್ಥನಾ ಮಂದಿರಗಳು ಜಲಾವೃತವಾಗಿವೆ.
ರಾತ್ರಿಯ ವೇಳೆ ನೇತ್ರಾವತಿ ನೀರಿನ ಮಟ್ಟ ಏರುತ್ತಿದೆ. ನೀರಿನ ಮಟ್ಟ 10 ಗಂಟೆ ವೇಳೆಗೆ 10.8 ಮೀಟರ್ ಇತ್ತು. ಗಂಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗಿದೆ.
ನಾವೂರು,ಅಜಿಲಮೊಗರು,ಬಂಟ್ವಾಳ ಸಮೀಪದ ಜಕ್ರಿಬೆಟ್ಟು,ಬಡ್ಡಕಟ್ಟೆ,ವಿ.ಪಿ.
ಬಂಟ್ವಾಳ ಬಡ್ಡಕಟ್ಟೆ ಮೀನು ಮಾರ್ಕೆಟ್,ಬಸ್ ತಂಗುದಾಣ ಪ್ರದೇಶ,ಆಲಡ್ಕ,ಜಕ್ರಿಬೆಟ್ಟು,ಬಳಿ ರಸ್ತೆಯಲ್ಲಿ ವಾಹನ ಸಂಚಾರವು ಸ್ಥಗಿತಗೊಂಡಿದೆ. ಎಲ್ಲಾ ವಾಹನಗಳು ಗಾಣದಪಡ್ಪ ಆಗಿ ನೆರೆ ವಿಮೋಚನಾ ರಸ್ತೆಯ ಮೂಲಕಬಂಟ್ವಾಳಕ್ಕೆಪ್ರವೇಶಿಸುತ್ತಿವೆ.
ಬಂಟ್ವಾಳ ಶಾಸಕ ಸ್ಥಿತಿಯನ್ನು ಅವಲೋಕಿಸುವುದರ ಜೊತೆಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿಗಳಾದ ಜಯಪೂಜಾರಿ,ಬಾಲಕೃಷ್ಣ ಪೂಜಾರಿ, ಲಕ್ಷಣ ಪೂಜಾರಿ, ಪೂವಪ್ಪ ಪೂಜಾರಿ ಎಂಬವರ ಮನೆಗಳಿಗೆ ನಾಡದೋಣಿಯ ಮೂಲಕ ತೆರಳಿದ ಶಾಸಕ, ಸಂತ್ರಸ್ಥರನ್ನು ಭೇಟಿ ಯಾಗಿ ಇವರನ್ನು ದೋಣಿಯ ಮೂಲಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರು.ಇಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು ,ದ್ವೀಪದಂತಿರುವ ಪ್ರದೇಶಗಳಿಗೆ ನಾಡದೋಣಿಯ ಮೂಲಕ ಮಾತ್ರ ಸಂಪರ್ಕ ಸಾಧ್ಯವಾಗಿತ್ತು. ಜಲಾವೃತಗೊಂಡ ಅಜಿಲಮೊಗರು ಮಸೀದಿ ಗೆ ಬೇಟಿ ನೀಡಿ ಅಲ್ಲಿನ ಪ್ರಮುಖರಿಂದ ಮಾಹಿತಿ ಪಡೆದರು.
ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ತಾಲೂಕಿನ ವಿವಿಧೆಡೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.