ಶುಕ್ರವಾರ ರಾತ್ರಿ ನೇತ್ರಾವತಿ ಹರಿವಿನಲ್ಲಿ ಏರಿಕೆಯಾಗಿದ್ದು ,10.8 ಮೀಟರ್ ನಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 10 ಗಂಟೆ ವೇಳೆಗೆ ಬಂಟ್ವಾಳ ಪೇಟೆಗೆ ನೇತ್ರಾವತಿ ನೀರು ನುಗ್ಗಿದೆ. ಈಗಾಗಲೇ ಬಂಟ್ವಾಳಕ್ಕೆ ಸಂಪರ್ಕಿಸುವ ಬಸ್ತಿಪಡ್ಪು, ಜಕ್ರಿಬೆಟ್ಟು, ಬಡ್ಡಕಟ್ಟೆಗಳಲ್ಲಿ ನೀರು ನುಗ್ಗಿದ್ದು, ಇದೀಗ ಮತ್ತಷ್ಟು ಮುಂದುವರಿದಿದೆ.
ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಧಾವಿಸಿದ್ದು,ಸೂಕ್ತ ರಕ್ಷಣಾ ಕಾರ್ಯ ನಡೆಸಲು ಸೂಚಿಸಿದರು. ತಹಶೀಲ್ದಾರ್ ರಶ್ಮಿ ಎಸ್. ಆರ್. ಸ್ಥಳದಲ್ಲಿದ್ದು, ವಿಪತ್ತು ನಿರ್ವಹಣಾ ಪಡೆ ಸನ್ನದ್ಧ ಸ್ಥಿತಿಯಲ್ಲಿದೆ. ಪರ್ಯಾಯ ವ್ಯವಸ್ಥೆಯಾಗಿ ಗಂಜಿ ಕೇಂದ್ರವನ್ನು ಬಂಟ್ವಾಳ ಐಬಿಯಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ.