ಕಲ್ಲಡ್ಕ

ವಿದ್ಯಾಭಾರತಿ ಪ್ರಾಂತ ಮಟ್ಟದ ಚೆಸ್, ಟೇಬಲ್ ಟೆನ್ನಿಸ್ ಕೂಟ

ಬಂಟ್ವಾಳ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾಸಂಸ್ಥಾನ್, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಚೆಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟವನ್ನು ಕಾಸರಗೋಡು ನೆಲ್ಲಿಕಟ್ಟೆಯ ಆಯುರ್ವೇದ ವೈದ್ಯೆ ಡಾ. ವಾಣಿಶ್ರೀ ಉದ್ಘಾಟಿಸಿದರು.

ಜಾಹೀರಾತು

ಹೆತ್ತವರ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಗುರುಗಳ ಆರ್ಶೀವಾದ, ಪ್ರೆರಣೆಯಿಂದ ಬಾಲ್ಯದಲ್ಲಿ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಚಾಂಪ್ಯನ್ ಶಿಪ್ ಪಡೆಯಲು ಹಾಗೂ ಪ್ರಸ್ತುತ ವೈದ್ಯ ವೃತ್ತಿಯನ್ನು ಮುಂದುವರೆಸಲು ಸಾಧ್ಯವಾಯಿತು. ಕ್ರೀಡೆ ಶಾರೀರಿಕ ದಾಢ್ಯತೆ, ಮನೋಲ್ಲಾಸ ನೀಡುವುದರೊಂದಿಗೆ, ಮನುಷ್ಯನ ಎಲ್ಲಾ ರೋಗಗಳ ವಿಮುಕ್ತಿಗೆ ಉತ್ತಮ ಮಾರ್ಗೋಪಾಯ ನೀಡಿ ಜೀವನವನ್ನು ಸುಂದರವಾಗಿಸುತ್ತದೆ. “ಕ್ರೀಡೆಯಲ್ಲಿ ಒಳಾಂಗಣ ಕ್ರೀಡೆ ಗ್ರಹಣ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿದರೆ, ಹೊರಾಂಗಣ ಕ್ರೀಡೆ ಸ್ನಾಯುಶಕ್ತಿ ಹಾಗೂ ದೈಹಿಕ ದೃಢsತೆಯನ್ನು ನೀಡುತ್ತದೆ ಎಂದು ಶ್ರೀರಾಮ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಯಾಗಿರುವ ಅವರು ತಿಳಿಸಿದರು.

ಇನ್ನೋರ್ವ ಹಿರಿಯ ವಿದ್ಯಾರ್ಥಿ ಪೆರಾಜೆ ಗ್ರಾಮ ಪಂಚಾಯತ್ತಿನ ಪಿ.ಡಿ.ಒ ಶಂಭುಕುಮಾರ್ ಶರ್ಮ ಮಾತನಾಡಿ ಶಾಲೆ ಎಂದರೆ ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲ ಶಿಕ್ಷಣದ ಜೊತೆಗೆ ಭಾರತೀಯತೆಯನ್ನು ನೀಡಿದರೆ ಮಾತ್ರ ಸ್ವಾಸ್ತ್ಯ ಸಮಾಜದ ನಿರ್ಮಾಣ ಆಗಲು ಸಾಧ್ಯ.ಜೀವನ ನಿಭಾಯಿಸಲು, ಸಾಧನೆಯ ಮೆಟ್ಟಿಲೇರಲು ಮಾತೃಭಾಷೆಯಿಂದ ಸಾಧ್ಯ ಹೊರತು ಆಂಗ್ಲಮಾಧ್ಯಮದ ವ್ಯಾಮೋಹದಿಂದಲ್ಲ ಎಂದು ಹೇಳಿದರು.

ಕ್ರೀಡೆಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಪ್ರಪಂಚದಾದ್ಯಂತ ಭಾರತ ದೇಶದ ಕೀರ್ತಿಯನ್ನು ಪಸರಿಸಬೇಕೆಂದು ಶ್ರೀರಾಮ ವಿದ್ಯಾಕೇಂದ್ರದ ಸಹ ಸಂಚಾಲಕರಾದ ರಮೇಶ್ ಎನ್ ಕಾರ್‍ಯಕ್ರಮದ ಅಧ್ಯಕ್ಷತೆವಹಿಸಿ ಕ್ರೀಡಾಪಟುಗಳಿಗೆ ಶುಭನುಡಿದರು.

ಜಾಹೀರಾತು

ವಿದ್ಯಾಭಾರತೀಯ ಪ್ರಾಂತೀಯ ಶಾರೀರಿಕ ಪ್ರಮುಖರಾದ ಆನಂದ ಶೆಟ್ಟಿಯವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕಾರ್‍ಯಕ್ರಮದಲ್ಲಿ ನೆಲ್ಲಿಕಟ್ಟೆಯ ಆಯುರ್ವೆದ ವೈದ್ಯರಾದ ವೆಂಕಟಗಿರೀಶ್, ಶ್ರೀರಾಮ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿಕುಮಾರಿ, ಶ್ರೀರಾಮ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ರವಿರಾಜ್ ಕಣಂತೂರು, ಕ್ರೀಡಾವ್ಯವಸ್ಥಾಪಕರು ,ತರಬೇತುದಾರರು, ತೀರ್ಪುಗಾರರು, ಕ್ರೀಡಾಪಟುಗಳು, ಶ್ರೀರಾಮಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿನ್ನಪ್ಪ ಏಳ್ತಿಮಾರ್ ನಿರೂಪಿಸಿ, ಮನೋಜ್ ಸ್ವಾಗತಿಸಿ ಪ್ರಶಾಂತ್ ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ