ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ನಿವೃತ್ತ ಸೈನಿಕ ಮೋಹನ್ ಜಿ.ಮೂಲ್ಯ ಅವರನ್ನು ಸನ್ಮಾನಿಸುವ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಿದ್ಧಕಟ್ಟೆ ಘಟಕ ಶುಕ್ರವಾರ ಕಾರ್ಗಿಲ್ ವಿಜಯ ದಿವಸ್ ಆಚರಣೆ ನಡೆಸಿತು.
ಸಂಗಬೆಟ್ಟು ನಿವಾಸಿಯಾಗಿರುವ ನಿವೃತ್ತ ಸೈನಿಕ ಮೋಹನ್.ಜಿ.ಮೂಲ್ಯ ಮನೆಗೆ ಭೇಟಿ ನೀಡಿ, ಅವರೊಂದಿಗೆ ಮಾತುಕತೆ ನಡೆಸಿದ ಎಬಿವಿಪಿ ಸದಸ್ಯರು, ಅವರನ್ನು ಸನ್ಮಾನಿಸಿ ಗೌರವಿಸಿದರು.
ಸೈನ್ಯದಲ್ಲಿರುವ ಎಲ್ಲರು ಒಂದೇ ರೀತಿಯ ಚಿಂತನೆ, ಮನೋಭಾವ ಹೊಂದಿರುವುದರಿಂದ ಯುದ್ಧದಲ್ಲಿ ಹೋರಾಡಲು ಹೊಸ ಹುಮ್ಮಸ್ಸು ಬರುತ್ತದೆ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ಭಾರತ ಮಾತೆಯ ಸೇವೆಗೆ ಮುಂದಾಗಬೇಕು ಎಂದು ಈ ಸಂದರ್ಭ ಮೋಹನ್ ಮೂಲ್ಯ ಹೇಳಿದರು. ಎಬಿವಿಪಿ ಹಿತೈಷಿಗಳಾದ ರತ್ನ ಕುಮಾರ್ ಚೌಟ, ಸುರೇಶ್ ಕುಲಾಲ್, ಬೋಜ ಶೆಟ್ಟಿಗಾರ್, ಸಂತೋಷ್ ಸೋರ್ನಾಡ್ ಹಾಗೂ ಕಾರ್ಯಕರ್ತರಾದ ರಾಜೇಶ್, ಗುರುಪ್ರಸಾದ್, ದಿನೇಶ್, ದೀಪಕ್, ಪ್ರಜ್ವಲ್, ಕಿರಣ್, ಅರುಣ್, ಮನೀಶ್, ಪ್ರದೀಪ್, ರಂಜಿತ್, ಲಿತೇಶ್, ಸೂರಾಜ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…