ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ವರ್ಗದ ಕುಮ್ಕಿ ಸ್ಥಳವನ್ನು ವರ್ಗ ಜಮೀನು ಮಾಲಕರಿಗೆ ಖಾಯಂ ಮಾಡದೆ ಸರಕಾರದ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ, ಬಡವರಿಗೆ , ನಿವೃತ್ತ ಸೈನಿಕರಿಗೆ ಹಂಚಬೇಕು ಎಂದು ಬುಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ನೇತೃತ್ವದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಲಾಯಿತು.
ವರ್ಗದ ಜಾಗದವರು ಅವರ ವರ್ಗ ಜಮೀನಿನ ಲಗ್ತಿ ಕುಮ್ಕಿ ಸ್ಥಳ ಎಂದು ಎಕ್ರಾನುಗಟ್ಟಲೆ ಸ್ಥಳವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಜಮೀನಿನ ಕೊರತೆಯಿಂದ ನಿವೇಶನ ರಹಿತವಾಗಿದ್ದಾರೆ ಕಡು ಬಡವರು ವಾಸ್ತವ್ಯಕ್ಕೆ ಜಾಗದ ಸಮಸ್ಯೆ ಯಿಂದ ಕೊರಗುತ್ತಿದ್ದಾರೆ. ಹಾಗಾಗಿ ಬಡವರ ಕಣ್ಣೀರೋರಸುವ ಉದ್ದೇಶದಿಂದ ಅಂತಹ ಜಾಗವನ್ನು ಅಧಿಕಾರಿಗಳು ಗುರುತಿಸಿ ಸರಕಾರದ ಕಚೇರಿ ನಿರ್ಮಾಣ, ನಿವೇಶನ ರಹಿತರಿಗೆ ನಿವೇಶನ ಕ್ಕೆ , ಬಡವರಿಗೆ ನಿವೇಶನ ಮಂಜೂರಾತಿ ಬಗ್ಗೆ, ನಿವೃತ್ತ ಸೈನಿಕರಿಗೆ ಕಾಯ್ದಿರಿಸಿ ಎಂದು ಮನವಿ ಮಾಡಿದರು.
ಇಂತಹ ಕ್ರಮದಿಂದ ಅತೀವವಾಗಿ ಜಮೀನು ಹೊಂದಿದ ವ್ಯಕ್ತಿಗಳು ಸರಕಾರಿ ಜಮೀನು ಕಬಳಿಕೆ ಮಾಡುವುದು ತಪ್ಪುತ್ತದೆ. ಬಂಟ್ವಾಳ ತಾಲೂಕು ಜಿಲ್ಲಾ ಕೇಂದ್ರ ವಾಗುವ ಸಾಧ್ಯತೆ ಇರುವುದರಿಂದ ಅಂತಹ ಸಂದರ್ಭದಲ್ಲಿ ಸರಕಾರಿ ಜಮೀನಿನ ಅವಶ್ಯಕತೆಯೂ ಇರುತ್ತದೆ, ಈ ಕ್ರಮದಿಂದ ಇದು ಸಾಧ್ಯ ಎಂದವರು ಹೇಳಿದರು.
ಈ ಸಂದರ್ಭ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ, ತಾಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಸಾಮಾಜಿಕ ಕಾರ್ಯಕರ್ತರಾದ ಭಾನುಚಂದ್ರ ಕೃಷ್ಣಾಪುರ, ಪ್ರಮುಖರಾದ ಮಹಮ್ಮದ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು.