ಸದಾ ಅವ್ಯವಸ್ಥೆಯ ಆಗರವಾಗಿ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದ್ದ ಬಂಟ್ವಾಳ ಮಿನಿ ವಿಧಾನಸೌಧಕ್ಕೀಗ ಹೊಸ ಲುಕ್. ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರಿಗೂ, ಸಿಬ್ಬಂದಿಗೂ ಸಮಸ್ಯೆ ಉಂಟುಮಾಡುತ್ತಿದ್ದ ಜಾಗದಿಂದ ಇದೀಗ ಅಟಲ್ ಜೀ ಜನಸ್ನೇಹಿ ಕೇಂದ್ರ ಕಟ್ಟಡದ ಮಧ್ಯಭಾಗದ ಖಾಲಿ ಜಾಗಕ್ಕೆ ಶಿಫ್ಟ್ ಆಗಿದೆ.
ಸಾರ್ವಜನಿಕರು ಪಾಣೆಮಂಗಳೂರು, ಬಂಟ್ವಾಳ ಹೋಬಳಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳು, ಆಧಾರ್ ಸೆಂಟರ್, ಅರ್ಜಿ ಸ್ವೀಕೃತಿಗೆಂದು ಬರುವವರಿದ್ದರೆ ನೇರ ಮಿನಿ ವಿಧಾನಸೌಧ ಪ್ರವೇಶಿಸಿದ ಕೂಡಲೇ ಅದರ ಮಧ್ಯಭಾಗಕ್ಕೆ ಬಂದು ನಿಲ್ಲಬಹುದು. ಮಳೆನೀರು ಬೀಳದಂತೆ ಹಾಗೂ ಬಿಸಿಲು ಕಾಣುವಂತ ಛಾವಣಿ ಇರುವ ಈ ಜಾಗದಲ್ಲಿ ನಿಲ್ಲಲೂ ಅವಕಾಶ ಹೆಚ್ಚು. ಹಿಂದೆ ಕಾರ್ಯಾಚರಿಸುತ್ತಿದ್ದ ಜಾಗದಲ್ಲಿ ಕೇಬಲ್ ಗಳು, ಅಲ್ಲಲ್ಲಿದ್ದು, ಸಮಸ್ಯೆ ತಲೆದೋರುತ್ತಿತ್ತು. ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದರು.