ಬಂಟ್ವಾಳ

ಪರಂಪರೆಯ ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ: ರಾಜೇಶ್ ನಾಯ್ಕ್

ನಮ್ಮ ಮುನಿಗಳಿಂದ ಕರಗತವಾದ ಪರಂಪರೆಯ ಯೋಗಕ್ಕೆ ಇಂದು ಅಂತರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಜಾಹೀರಾತು

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಎಸ್‌ವಿಎಸ್ ದೇವಳ  ವಿದ್ಯಾಸಂಸ್ಥೆಯ  ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ   ಅಂಗವಾಗಿ ಬಂಟ್ವಾಳದ ನೇತ್ರಾವತಿ ನದಿ ಕಿನಾರೆಯಲ್ಲಿರುವ  ಶ್ರೀ ತಿರುಮಲ ವೆಂಕಟರಣ ದೇವಸ್ಥಾನ ಕಲ್ಯಾಣ ಮಂಟಪದ ಸಭಾಂಗಣ ಹಾಗೂ ಹೊರಾಂಗಣದಲ್ಲಿ ಯೋಗಾಭ್ಯಾಸದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು

ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆಯ ಸುಮಾರು  700 ಮಂದಿ ವಿದ್ಯಾರ್ಥಿಗಳು ಎರಡು ಗಂಟೆಗಳ ಕಾಲ ನಿರಂತರ ಯೋಗಾಭ್ಯಾಸ  ಮಾಡಿ ಗಮನ ಸೆಳೆದರು.

ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆಯ ಅಧ್ಯಕ್ಷ  ಬಿ.ಪುರುಷೋತ್ತಮ ಶೆಣೈ, ಸಂಚಾಲಕ ಎ. ಗೋವಿಂದ ಪ್ರಭು, ಕೋಶಾಧಿಕಾರಿ  ಪಿ. ಪ್ರವೀಣ್ ಕಿಣಿ, ಪ್ರಮುಖರಾದ  ಪ್ರಕಾಶ್ ಪ್ರಭು, ವಸಂತ ಮಲ್ಯ, ಶ್ರೀನಿವಾಸ ಪೈ ಮೊದಲಾದವರು ಹಾಜರಿದ್ದರು. ಶಾಲಾ ಮುಖ್ಯೋಪಧ್ಯಾಯರಾದ ನಂದಿನಿ ಬಾಯಿ, ಚಂದ್ರಮ್ಮ, ರೋಶನಿ ತಾರಾ ಡಿಸೋಜಾ, ಕುಸಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಂಚಾಲಕ ಗೋಕುಲ್ ನಾಥ್ ಶೆಣೈ, ನಂದನೇಶ್ವರ ಉಪವಲಯ ಸಂಚಾಲಕ ನಾರಾಯಣ, ಶಿಕ್ಷಣ ಪ್ರಮುಖ ಹರೀಶ್, ಮಹಿಳಾ ಸಂಚಾಲಕಿ ಮಲ್ಲಿಕಾ, ವಿವಿಧ ಶಾಖಾ ಪ್ರಮುಖರಾದ ಶಶಿಕಲಾ, ಸುನೀಲ್, ಸತೀಶ್, ವಜ್ರಾಕ್ಷಿ, ವೇದ, ಶೋಭಾ, ಪ್ರಾಪ್ರಿ ಯೋಗ ಶಿಕ್ಷಣ ಕಲಿಸಿಕೊಟ್ಟರು. ವಿದ್ಯಾರ್ಥಿನಿಯರಾದ ಶ್ರೀ ಲಕ್ಷ್ಮಿ  ಪೈ ಸ್ವಾಗತಿಸಿದರು, ಸ್ಪೂರ್ತಿ ವಂದಿಸಿದರು, ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ