ಪಠ್ಯ ಪುಸ್ತಕಗಳ ಜೊತೆಗೆ ಇತರ ಪುಸ್ತಕಗಳನ್ನೂ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಸತೀಶ್ ಶೆಟ್ಟಿ ಅವರು ಹೇಳಿದ್ದಾರೆ.
ಬಂಟ್ವಾಳದ ಬಿ.ಆರ್.ಎಂ.ಪಿ.ಸಿ.ಪಿ. ಶಾಲೆಯಲ್ಲಿ ಮಂಗಳೂರು ರಾಮಕೃಷ್ಣ ಆಶ್ರಮದ ಸಂಚಾರಿ ಗ್ರಂಥಾಲಯದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಿರ್ವಹಿಸಿ ಮಾತನ್ನಾಡಿದ ಅವರು, ಕಲಿತ ವಿದ್ಯೆ, ಪಡೆದ ಜ್ಞಾನ ಇವೇ ಮಾನವನ ಬೆಳವಣಿಗೆಗೆ ಪೂರಕ,ತಂದೆ ತಾಯಿಗಳನ್ನು ಗೌರವಿಸಿ. ಶಿಸ್ತಿನಿಂದ ಜೀವನವನ್ನು ರೂಪಿಸಿಕೊಳ್ಳಿ. ಸ್ವಚ್ಛತೆಯು ನಿಮ್ಮನ್ನು ಭಗವಂತನೆಡೆಗೆ ಒಯ್ಯುತ್ತದೆ ಎಂದು ಹೇಳಿದರು.
ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ. ಶುಭಾಶಂಸನೆಗೈದರು. ಆಸಕ್ತ ವಿದ್ಯಾರ್ಥಿಗಳು ರಾಮಕೃಷ್ಣ ಪರಮಹಂಸ, ವಿವೇಕಾನಂದ ಮೌಲ್ಯಾಧಾರಿತ ಪುಸ್ತಕಗಳನ್ನು ಖರೀದಿಸಿದರು. ಚಿತ್ರಕಲಾ ಶಿಕ್ಷಕ ಹರೀಶ್ ಆಚಾರ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…