ಮಜಿ ವೀರಕಂಭದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಉದ್ಘಾಟಿಸಿದರು.
ಉಚಿತ ಸಮವಸ್ತ್ರ, ಕಲಿಕಾ ಸಾಮಾಗ್ರಿಗಳ ವಿತರಣೆ ಹಾಗೂ ಕೊಡುಗೆಗಳ ಸ್ವೀಕಾರ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಗೆ ಕ್ರೀಡಾ ಉಪಕರಣಗಳನ್ನು ಖರೀದಿಸಲು 5000 ಹಾಗೂ ಶಾಲೆಗೆ 2 ಕೊಠಡಿಗಳನ್ನು ನಿರ್ಮಿಸಲು ತನ್ನ ಅನುದಾನದಿಂದ ನೀಡುವುದಾಗಿಯೂ ಹಾಗೂ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಪ್ರಾರಂಭಿಸಲು ಅನುಮತಿ ಪಡೆಯಲು ಇಲಾಖಾ ಮಟ್ಟದಲ್ಲಿ ಒತ್ತಡ ತರುವುದಾಗಿ ಭರವಸೆ ನೀಡಿದರು.
ವಿಧ್ಯಾರ್ಥಿಗಳ ಕಲಿಕೆಗೆ ಹಾಗೂ ಶಾಲೆಗಳಿಗೆ ನೀಡುವ ಸಹಕಾರವು ಒಂದು ದೇವಸ್ಥಾನದ ಅಭಿವೃದ್ಧಿಗೆ ಮಾಡುವ ಸಹಾಯಕ್ಕಿಂತಲೂ ಮಿಗಿಲಾದುದು. ಶಾಲೆ ಊರಿಗೆ ಕಲಶವಿದ್ದಂತೆ ಅದರ ಉನ್ನತಿಗಾಗಿ ಸಹಕರಿಸುವುದು ಪ್ರತಿಯೊಬ್ಬ ನಾಗರೀಕನ ಕತ೯ವ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಮಜಿ ಶಾಲಾ ಅಭಿಮಾನಿ ಬಳಗ ಹಾಗೂ ಅಭಿವೃದ್ಧಿಗಾಗಿ ಪಣ ತೊಟ್ಪಿರುವ ತಂಡವು ಉತ್ತಮವಾಗಿ ಶ್ರಮಿಸುತ್ತಿರುವುದು ಸಂತೋಷಕರ ವಿಷಯವಾಗಿದೆ ಎಂದು ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್ ಈ ಸಂದರ್ಭ ಹೇಳಿದರು.
ಮಜಿ ಶಾಲೆಯು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಹೆಸರು ಪಡೆದಿದ್ದು ಊರಿಗೆ ಸಂತಸಕರವಾದ ವಿಷಯವಾಗಿದೆ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ತಮ್ಮಿಂದ ಸಾಧ್ಯವಾಗುವ ಕೊಡುಗೆಗಳನ್ನು ನೀಡಲು ಗ್ರಾ.ಪಂ.ಯಾವಾಗಲೂ ಸಿಧ್ಧವಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ಭರವಸೆ ನೀಡಿದರು.
ಎಸ್.ಕೆ.ಪಿ.ಎ. ಬಂಟ್ವಾಳ ವಲಯವು ಕ್ಷೀರಭಾಗ್ಯಕ್ಕೆ ವಿನ್ನರ್ ನೀಡಿ ಸಹಕಾರಿಸಲು ಸಂತೋಷ ಪಡುತ್ತಿದೆ ಎಂದು ಎಸ್.ಕೆ.ಪಿ.ಎ. ಬಂಟ್ವಾಳ ವಲಯ ಸದಸ್ಯ ಜಯರಾಮ ರೈ ತಿಳಿಸಿದರು. ಶಾಲೆಯ ಏಳಿಗೆಗಾಗಿ ಶಾಲಾ ಅಭಿವೃದ್ಧಿ ಸಮಿತಿ ಶ್ರಮಿಸುತ್ತಿದೆ ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಪುನರುಜ್ಜೀವನ ನೀಡುವಲ್ಲಿ ಹಲವಾರು ಜನರ ಶ್ರಮವಿದೆ. ಶಾಲೆಯ ಬಗ್ಗೆ ಅಭಿಮಾನ ಮೂಡಿದಾಗ ಮಾತ್ರ ಇಂತಹ ಕೆಲಸಗಳು ಸಾಧ್ಯ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ಮೂಲ್ಯ ಅಧ್ಯಕ್ಷತೆ ವಹಿಸಿ ನುಡಿದರು.
ಶಾಲೆ ದತ್ತು ಸ್ವೀಕರಿಸಿದ್ದ ಮಾತಾ ಡೆವಲಪ್ಪರ್ಸನ ಸಂತೋಷ್ ಕುಮಾರ್ ಶೆಟ್ಟಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಉಚಿತ ಸಮವಸ್ತ್ರ, ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು ಉಚಿತ ಊಟದ ಬಟ್ಟಲು ಹಾಗೂ ಲೋಟ, ಪ್ರಸಾದ್ ನಂದಂತಿಮಾರು ಬೆಳಗಿನ ಉಪಹಾರಕ್ಕೆ ವರ್ಷಪೂರ್ತಿ ಬಿಸ್ಕೆಟ್ , ನಾಗರಾಜ ಶಿಲ್ಪಿ ಅವರಿಂದ ಬೆಲ್ಟ್, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಅವರಿಂದ ಗುರುತಿನ ಚೀಟಿ, ಮಜಿ ಶಾಲೆಯ ಅಭಿಮಾನಿಗಳ ಬಳಗದ ವತಿಯಿಂದ ಬರವಣಿಗೆಯ ಪುಸ್ತಕಗಳು, ಮಾತೃಶ್ರೀ ಗೆಳೆಯರ ಬಳಗದ ವತಿಯಿಂದ ದಿನಚರಿ ಪುಸ್ತಕ , ಗುಡ್ವೀಲ್ ಪಾಣೆಮಂಗಳೂರು ಇವರಿಂದ ಕಸ ವಿಂಗಡಣಾ ಬುಟ್ಟಿಗಳು , ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್ ನಿಂದ 5 ಜೊತೆ ಹಾಗೂ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಕಲ್ಲಡ್ಕ ವತಿಯಿಂದ 2 ಜೊತೆ ಬೆಂಚು ಡೆಸ್ಕುಗಳು , ಮುಂತಾದ ವಸ್ತುಗಳನ್ನು ಕೊಡುಗೆಗಳಾಗಿ ನೀಡಿದರು.
ಗ್ರಾಮಪಂಚಾಯತ್ ಸದಸ್ಯೆಯರಾದ ಜಯಂತಿ , ಪದ್ಮಾವತಿ , ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ , ಕಾಯ೯ದಶಿ೯ ಚಿನ್ನಾ ಮೈರ, ಪ್ರಸಾದ್ ನಂದಂತಿಮಾರು, ಸಮಾಜ ಸೇವಾ ಬ್ಯಾಂಕ್ ಬಂಟ್ವಾಳ ನಿರ್ದೇಶಕ ವಿಶ್ವನಾಥ ಎಂ ಕಲ್ಲಡ್ಕ ರೈತರಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಕೊರಗಪ್ಪ ನಾಯ್ಕ , ನಾಗರಾಜ್ ಶಿಲ್ಪಿ , ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಶಾಲಾ ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರು ಹಾಜರಿದ್ದರು.
ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಶಕುಂತಳಾ ವಂದಿಸಿದರು. ಶಿಕ್ಷಕಿಯರಾದ ಹರಿಣಾಕ್ಷಿ ಮತ್ತು ಸಂಗೀತ ಶರ್ಮಾ ಕಾಯ೯ಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸಿಸಿಲಿಯ, ಚೈತ್ರ , ಶ್ವೇತ , ಹಾಗೂ ಜಯಲಕ್ಷ್ಮಿ, ಮೀನಾಕ್ಷಿ ಸಹಕರಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)