ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ 2019ನೇ ಸಾಲಿನ ಶೈಕ್ಷಣಿಕ ಸೇವಾ ಯೋಜನೆ ನಡೆಯಿತು.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಸಮೀಪದ ನಡುಮೊಗರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-2020ನೇ ಶಾಲಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಮತ್ತು ಶೈಕ್ಷಣಿಕ ಸೇವಾ ಯೋಜನೆಯಲ್ಲಿ ಗುರುತಿಸಲಾದ ಸಂಸ್ಥೆಯ ಸೇವಾ ಮನೋಬಾಂಧವರ ಇಬ್ಬರು ಮಕ್ಕಳ ಶಿಕ್ಷಣಕ್ಕೆ ರೂ.20,000 ಮತ್ತು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಮಂಗಳೂರು ತಾಲೂಕು ಗುರುಪುರ ಮುಳೂರು ನಡುಗುಡ್ಡೆ ದಿವಂಗತ ಶೇಖರ್ ಪೂಜಾರಿಯವರ ಇಬ್ಬರ ಮಕ್ಕಳ ಶಿಕ್ಷಣಕ್ಕೆ ರೂ.20,000 ಚೆಕ್ ಹಸ್ತಾಂತರ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.
ಹಿರಿಯರು, ಮಾರ್ಗದರ್ಶಕರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಡುಮೊಗರು ಗುತ್ತು ಶಿವರಾಮ ಶೆಟ್ಟಿಯವರು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸಂಸ್ಥೆಯ ಕಾರ್ಯ ವೈಖಿರಿಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅದo ಕುಂಞ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಂದ್ರಾಹಸ ಶಂಕರಬೆಟ್ಟು, ಯುವಕ ಮಂಡಲ(ರಿ.) ನಡುಮೊಗರು ಉಪಾಧ್ಯಕ್ಷರಾದ ರಮೇಶ್ ಪೂಜಾರಿ ಡೆಚ್ಚಾರು, ಶ್ರೀ ರಾಮಾಂಜನೆಯ ಗೆಳೆಯರ ಬಳಗ(ರಿ.) ಮೈರ ಇದರ ಅಧ್ಯಕ್ಷರಾದ ಉಮೇಶ್ ಪೂಜಾರಿ ಮೈರ, ಪುರೋಹಿತರಾದ ನವೀನ್ ಶಾಂತಿ ಅಡ್ಯಾಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿಗಳು, ಯುವಕ ಮಂಡಲ(ರಿ.) ಸದಸ್ಯರು, ರಾಮಾಂಜೆನೆ ಗೆಳೆಯರ ಬಳಗ(ರಿ.) ಸದಸ್ಯರು, ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ನಿರ್ವಾಹಕರು ಮತ್ತು ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿ ವೃಂದ ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕ ಮಧುಸೂಧನ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರ ಕೆ ವಂದಿಸಿದರು.