ಬಂಟ್ವಾಳ

ನೇತ್ರಾವತಿ ನದಿಯಲ್ಲಿ ಹೂಳೆತ್ತಿದ ಬಳಿಕ ನೀರ ಸೆಲೆ, ತುಂಬೆಯತ್ತ ಸಾಗಿದ ಹರಿವು

ನೀರಿಗೆ ಕೊರತೆ ಇಲ್ಲ – ವೀಕ್ಷಣೆ ಬಳಿಕ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಕಳೆದ ಕೆಲ ದಿನಗಳಿಂದ ನೇತ್ರಾವತಿಯಲ್ಲಿ ಹೂಳು ತೆಗೆಯಲಾರಂಭಿಸಿದ ಬಳಿಕ ಬಂಟ್ವಾಳದ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿಯಲಾರಂಭಿಸಿದ್ದು, ಹೆಚ್ಚುವರಿ ನೀರನ್ನು ಶುಕ್ರವಾರ ಸಂಜೆ ತುಂಬೆ ಡ್ಯಾಂನತ್ತ ಬಿಡಲಾಗಿದೆ.

ಜಾಹೀರಾತು

ಶುಕ್ರವಾರ ಸಂಜೆ ಜಕ್ರಿಬೆಟ್ಟುವಿನ ಇಂಟಕ್‌ವೆಲ್‌ಗೆ ಭೇಟಿ ಪಂಪಿಂಗ್ ವ್ಯವಸ್ಥೆಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಸರಪಾಡಿ ಎಂಆರ್‌ಪಿಎಲ್ ಡ್ಯಾಂ ಬಳಿ ಡ್ರೆಜ್ಜಿಂಗ್ ಮೆಷಿನ್ ಬಳಸಿ ಹೂಳು ಮೇಲೆತ್ತುತಿದ್ದಂತೆ ಅಲ್ಲಲ್ಲಿ ಶೇಖರಣೆಯಾಗಿದ್ದ ನೀರು ಜಕ್ರಿಬೆಟ್ಟುವಿನ ಜಾಕ್‌ವೆಲ್‌ನಲ್ಲಿ ತುಂಬಿ ಕೊಂಡಿದೆ. ಮೊನ್ನೆ ರಾತ್ರಿ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರು ತುಂಬಲು ಸಾಧ್ಯವಿಲ್ಲ. ಡ್ರಜ್ಜಿಂಗ್ ಮೂಲಕ ಗೋವಿಂದ ಪ್ರಭು ಪ್ರಯತ್ನದಿಂದ ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದಿದೆ. ಇಲ್ಲಿನ ಕಟ್ಟದಲ್ಲಿ ಸಂಗ್ರಹಿಸಿಟ್ಟಿದ್ದ ಹೆಚ್ಚುವರಿ ನೀರನ್ನು ಮಂಗಳೂರಿನ ನಾಗರಿಕರು ಕೂಡಾ ಬಳಸಿಕೊಳ್ಳುವ ನಿಟ್ಟಿನಲ್ಲಿ ತುಂಬೆ ಡ್ಯಾಂನತ್ತ ಹರಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಸದ್ಯಕ್ಕೆ ಬಂಟ್ವಾಳದ ನಾಗರಿಕರಿಗರ ನೀರಿನ ಅಭಾವವಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಆದರೂ, ಜನರು ನೀರಿನ ಅಗತ್ಯತೆಯನ್ನು ತಿಳಿದುಕೊಂಡು ಮಿತವಾಗಿ ಬಳಸುವಂತೆ ಮನವಿ ಮಾಡಿಕೊಂಡರು.

 

ಜಾಹೀರಾತು

ಪುರಸಭೆ ಸದಸ್ಯ ಎ.ಗೋವಿಂದ ಪ್ರಭು ಸ್ವಯಂ ಮುತುವರ್ಜಿ ವಹಿಸಿ ಹೂಳು ತುಂಬಿದ ನೇತ್ರಾವತಿಯಲ್ಲಿ ನೀರು ಹರಿಸುವ ಭಗೀರಥ ಯತ್ನ ನಡೆಸುತ್ತಿರುವುದನ್ನು ಶ್ಲಾಘಿಸಿದ ಶಾಸಕರು, ಅವರ ಮಾದರಿ ಕಾರ್ಯ ಅನುಸರಣೀಯ ಎಂದರು.

ಈ ಸಂದರ್ಭ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ದೇವದಾಸ್ ಶೆಟ್ಟಿ, ಸರಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ದನಂಜಯ್ ಶೆಟ್ಟಿ, ಸಂತೋಷ್ ರಾಯಿಬೆಟ್ಟು, ಸುದರ್ಶನ ಬಜ, ಅಭಿಷೇಕ್ ರೈ, ಕಾರ್ತಿಕ್ ಬಲ್ಲಾಳ್, ಪುರುಷೋತ್ತಮ ಶೆಟ್ಟಿ, ಜೋಕಿಂ ಡಿಸೋಜ, ಶಿವರಾಮ ಶೆಟ್ಟಿ ಹಾಜರಿದ್ದರು.
ಈಗ ಹೇಗಿದೆ:

ಶುಕ್ರವಾರ ಬೆಳಿಗ್ಗೆಯಿಂದ ತುಂಬೆ ಡ್ಯಾಂನಲ್ಲಿ 2.34 ಮೀ. ನೀರು ಇದ್ದು, ಮಂಗಳೂರಿಗೆ ನೀರು ಪೂರೈಕೆ ಹಿನ್ನಲೆಯಲ್ಲಿ ಪಂಪಿಂಗ್ ಕಾರ್ಯ ನಡೆದರೂ ಸಂಜೆ 6 ಗಂಟೆಯ ವೇಳೆಗೆ ಡ್ಯಾಂನಲ್ಲಿ ಯಥಾಸ್ತಿತಿಯಲ್ಲಿತ್ತು.
ನೆಕ್ಕಿಲಾಡಿ ಡ್ಯಾಂನಿಂದ ಹೆಚ್ಚುವರಿ ನೀರು ಹರಿದುಬಂದು ಎಂಆರ್‌ಪಿಎಲ್ ಡ್ಯಾಂನ ಅಲ್ಲಲ್ಲಿ ಶೇಖರಣೆಯಾಗಿತ್ತು. ನಾಲ್ಕು ದಿನಗಳ ಹಿಂದೆ ಶಾಸಕ ರಾಜೇಶ್ ನಾಯ್ಕ್ ಮತ್ತು ಅಧಿಕಾರಿಗಳ ತಂಡ ಎಂಆರ್‌ಪಿಎಲ್ ಡ್ಯಾಂಗೆ ತೆರಳಿ ನೀರಿನ ಮಟ್ಟವನ್ನು ಪರಿಶೀಲಿಸಿದಾಗ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿತ್ತು. ಕಳೆದ 2 ದಿನಗಳಿಂದ ಶಾಸಕರ ನೇತೃತ್ವದಲ್ಲಿ ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ಮುತುವರ್ಜಿ ವಹಿಸಿ, ಡ್ಯಾಂನ ಗೇಟ್ ಮತ್ತು ಪರಿಸರದಲ್ಲಿ ತುಂಬಿದ್ದ ಹೂಳನ್ನು ತೆರವುಗೊಳಿಸಿದ ಪರಿಣಾಮ ನೀರು ಕೊಂಚ ಹರಿಯಲಾರಂಬಿತು.
ಇದರ ಪರಿಣಾಮವಾಗಿ ಶುಕ್ರವಾರ ಜಕ್ರಿಬೆಟ್ಟುವಿನಲ್ಲಿರುವ ಇಂಟೆಕ್‌ವೆಲ್‌ನಲ್ಲಿ ನೀರು ಶೇಖರಣೆಯಾಗಿದೆ. ಸಂಜೆ ನೀರಿನ ಒಳ ಹರಿವು ಹೆಚ್ಚಾದರಿಂದ ಈ ಮೊದಲು ಇಂಟೆಕ್‌ವೆಲ್ ಸಮೀಪ ಕಟ್ಟಿದ್ದ ಕಟ್ಟವನ್ನು ತೆರವು ಮಾಡಿ ಹೆಚ್ಚುವರಿ ನೀರನ್ನು ತುಂಬೆ ಡ್ಯಾಂನತ್ತ ಹರಿಯಬಿಡಲಾಗಿದೆ.

ಜಾಹೀರಾತು

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ