ಸುಳ್ಯ ನಗರ ಪಂಚಾಯತ್ ಗೆ ನಡೆದ ಚುನಾವಣಾ ಮತ ಎಣಿಕೆ ಶುಕ್ರವಾರ ನಡೆಯುತ್ತಿದ್ದು, 20 ಸ್ಥಾನಗಳಲ್ಲಿ 14ರಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ 4ರಲ್ಲಿ ಮತ್ತು ಪಕ್ಷೇತರರು 2ರಲ್ಲಿ ಜಯ ಗಳಿಸಿದ್ದಾರೆ ಎಂದು ಇತ್ತೀಚಿನ ಮಾಹಿತಿಗಳು ತಿಳಿಸಿವೆ.
ಲಭ್ಯ ಫಲಿತಾಂಶದ ಮಾಹಿತಿ ಇಲ್ಲಿದೆ.
1 ನೇ ವಾರ್ಡ್ ದುಗಲಡ್ಕದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಗೆಲುವು ( ಬಿಜೆಪಿ ಅಭ್ಯರ್ಥಿ ಶಶಿಕಲಾ 321, ಕಾಂಗ್ರೆಸ್ ಅಭ್ಯರ್ಥಿ ಜಯಂತಿ ಭಾಸ್ಕರ 314 , ಗೆಲುವಿನ ಅಂತರ – 7 ಮತಗಳು )
11 ನೇ ವಾರ್ಡ್ ಕುರುಂಜಿಗುಡ್ಡೆ ಬಿಜೆಪಿ ಅಭ್ಯರ್ಥಿ ಸುಧಾಕರ ಗೆಲುವು (ಬಿಜೆಪಿ ಅಭ್ಯರ್ಥಿ ಸುಧಾಕರ 250 , ಕಾಂಗ್ರೆಸ್ ಅಭ್ಯರ್ಥಿ ಚಂದ್ರ ಕುಮಾರ್ 20 : ಗೆಲುವಿನ ಅಂತರ – 230 ಮತಗಳು )
2 ನೇ ವಾರ್ಡ್ ಕೊಯಿಕುಳಿ ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ರೈ ಗೆಲುವು (ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ರೈ – 344, ಶಶಿಧರ ಎಂ.ಜೆ(ಕಾಂಗ್ರೆಸ್)-171 , ನೋಟಾ-9 : ಗೆಲುವಿನ ಅಂತರ 173 ಮತಗಳು )
12ನೇ ವಾರ್ಡ್ ಕೆರೆಮೂಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಪ್ಪ ಗೌಡ ಗೆಲುವು ( ಎಂ.ವೆಂಕಪ್ಪ ಗೌಡ-ಕಾಂಗ್ರೆಸ್-347 , ಲೋಕೇಶ್ ಕೆರೆಮೂಲೆ- 68 , ನೋಟಾ-2 : ಗೆಲುವಿನ ಅಂತರ 209 ಮತಗಳು )
13 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಿಯಾಜ್ ಕಟ್ಟೆಕಾರ್ ಗೆಲುವು ( ಪಕ್ಷೇತರ ಅಭ್ಯರ್ಥಿ- ರಿಯಾಜ್ 188 , ಬಿಜೆಪಿ ಅಭ್ಯರ್ಥಿ- ಬೂಡು ರಾಧಾಕೃಷ್ಣ – 133, ಕಾಂಗ್ರೆಸ್- ಅಭ್ಯರ್ಥಿ- ಗೋಕುಲ್ ದಾಸ್ – 22 , ಗೆಲುವಿನ ಅಂತರ – 55 ಮತಗಳು )
3 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಭಟ್ ಗೆಲುವು ( ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಭಟ್ 295 , ಬಿಜೆಪಿ ಅಭ್ಯರ್ಥಿ ರೋಹಿತ್ ಕೊಯಿಂಗೋಡಿ 218 , ನೋಟಾ 2 : ಗೆಲುವಿನ ಅಂತರ 77 ಮತಗಳು )
4 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಪಿ ಆರ್ ಗೆಲುವು ( ಬಿಜೆಪಿ ಅಭ್ಯರ್ಥಿ ನಾರಾಯಣ ಪಿ ಆರ್ -452 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಎಸ್ ಎಂ -315 ಮತಗಳು, ಪಕ್ಷೇತರ ಅಭ್ಯರ್ಥಿ ಬೆಟ್ಟಂಪಾಡಿ ಜನಾರ್ಧನ -37 ಮತಗಳು , ನೋಟಾ 7 : ಗೆಲುವಿನ ಅಂತರ- 135)
14 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಸುಶೀಲ ಗೆಲುವು ( ಬಿಜೆಪಿ ಅಭ್ಯರ್ಥಿ ಸುಶೀಲ -416 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಜುಬೈಬಾ 163 ಮತಗಳು , ಎಸ್ ಡಿ ಪಿ ಐ ಅಭ್ಯರ್ಥಿ ನಸ್ರಿಯಾ – 261 ಮತಗಳು , ನೋಟಾ-1 : ಗೆಲುವಿನ ಅಂತರ – 165 ಮತಗಳು )
5 ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಬುದ್ಧ ನಾಯ್ಕ್ ಗೆಲುವು ( ಬಿಜೆಪಿ ಅಭ್ಯರ್ಥಿ ಬುದ್ಧ ನಾಯ್ಕ್ -371 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಭವಾನಿ ಶಂಕರ ಕಲ್ಮಡ್ಕ 318 ಮತಗಳು , ನೋಟಾ-8 : ಗೆಲುವಿನ ಅಂತರ – 53ಮತಗಳು )
15 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶರೀಫ್ ಕಂಠಿ ಗೆಲುವು ( ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶರೀಫ್ ಕಂಠಿ -306 ಮತಗಳು ,ಬಿಜೆಪಿ ಅಭ್ಯರ್ಥಿ ಹರೀಶ್ ಬೂಡುಪನ್ನೆ 175 ಮತಗಳು , ಎಸ್ ಡಿ ಪಿ ಐ ಅಭ್ಯರ್ಥಿಅಬ್ದುಲ್ ಕಲಾಂ – 245 ಮತಗಳು , ನೋಟಾ-2 : ಗೆಲುವಿನ ಅಂತರ – 61 ಮತಗಳು )
6 ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಧೀರಾ ಕ್ರಾಸ್ತಾ ಗೆಲುವು ( ಬಿಜೆಪಿ ಅಭ್ಯರ್ಥಿ ಯತೀಶ್ ಕುಮಾರ್ -196 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಧೀರಾ ಕ್ರಾಸ್ತಾ 383 ಮತಗಳು , ಪಕ್ಷೇತರ ಅಭ್ಯರ್ಥಿ ಅಬ್ದುಲ್ ರಹಿಮಾನ 130 ಮತಗಳು , ಬಿ ಎಂ ಶಾರಿಕ್ – 6 ಮತಗಳು , ನೋಟಾ-3 : ಗೆಲುವಿನ ಅಂತರ – 188 ಮತಗಳು )
16 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಪ್ರಮಿತಾ ಗೆಲುವು ( ಬಿಜೆಪಿ ಅಭ್ಯರ್ಥಿ ಪ್ರಮಿತಾ – 351 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ – 272 ಮತಗಳು , ನೋಟಾ-6 : ಗೆಲುವಿನ ಅಂತರ – 79 ಮತಗಳು )
17 ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ಉಮ್ಮರ್ ಬಿ ಗೆಲುವು ( ಪಕ್ಷೇತರ ಅಭ್ಯರ್ಥಿ ಉಮ್ಮರ್ -182 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಕೆ ಎಂ ಮುಸ್ತಫಾ 167 ಮತಗಳು , ಬಿಜೆಪಿ ಅಭ್ಯರ್ಥಿ ರಂಜಿತ್ ಪೂಜಾರಿ- 74 ಮತಗಳು , ಆರ್ ಕೆ ಮಹಮ್ಮದ್ – 37 ಮತಗಳು , ಬದ್ರುದ್ದಿನ್ 0 ಮತಗಳು , ನೋಟಾ-7 : ಗೆಲುವಿನ ಅಂತರ – 15 ಮತಗಳು )
7 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಕಿಶೋರಿ ಶೇಟ್ ಗೆಲುವು ( ಬಿಜೆಪಿ ಅಭ್ಯರ್ಥಿ ಕಿಶೋರಿ ಶೇಟ್ -307 ಮತಗಳು , ಕಾಂಗ್ರೆಸ್ ಅಭ್ಯರ್ಥಿ ಪ್ರೇಮಾ ಟೀಚರ್ 222 ಮತಗಳು )