ಬಂಟ್ವಾಳ

ನವಭಾರತ ನಿರ್ಮಾಣದ ಯೋಜನೆಗಳೇ ವಿಜಯಕ್ಕೆ ಕಾರಣ: ಪ್ರಭಾಕರ ಪ್ರಭು

ಕೇಂದ್ರದ ಮೋದಿ ಸರಕಾರ ಕಳೆದ 5 ವರ್ಷಗಳ ಅವಧಿಯಲ್ಲಿ ನವ ಭಾರತದ ನಿರ್ಮಾಣ ಕ್ಕೆ ಘೋಷಿಸಿದ ಜಾಗತಿಕವಾದ ಐತಿಹಾಸಿಕ ತಿರ್ಮಾನಗಳೇ ಬಿ.ಜೆ.ಪಿ.ಭರ್ಜರಿ ಗೆಲುವಿಗೆ ಕಾರಣ ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ಹೇಳಿದರು.

ಸಿದ್ಧಕಟ್ಟೆಯಲ್ಲಿ ಮೆರವಣಿಗೆ ನಡೆಸಿ, ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಮೋದಿ ಪರವಾಗಿ ಜಯಕಾರ ಹಾಕಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಪ್ರಭು, ತ್ರತೀಯ ರಂಗ ಸಹಿತ ವಿರೋಧ  ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಪ್ರರ್ಜಾವಂತ ಸಮಾಜಕ್ಕೆ  ಅವಮಾನಿಸ್ಸುವ ರೀತಿಯಲ್ಲಿ ನೀಡಿದ  ತಪ್ಪು  ಸಂದೇಶಗಳೆ ಆ ಪಕ್ಷಗಳಿಗೆ ಮುಳುವಾಗಿ ಬಿ.ಜೆ.ಪಿ. ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು ಎಂದು ಕರ್ನಾಟಕ ದಲ್ಲೂ ಅಪವಿತ್ರ ಮೈತ್ರಿಯ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಜನವಿರೋಧಿ ಧೋರಣೆಗೆ ಜನತೆ ತಕ್ಕ ಶಾಸ್ತಿ ನೀಡಿದ್ದಾರೆ ಎಂದು ಹೇಳಿದರು.

ಪಕ್ಷದ ಸ್ಥಳೀಯ ಮುಖಂಡರಾದ ರತ್ನಕುಮಾರ್ ಚೌಟ,ಸತೀಶ್ ಪೂಜಾರಿ,ಉಮೇಶ್ ಗೌಡ,ಮಾಧವ ಶೆಟ್ಟಿಗಾರ್,ರಾಮಕೃಷ್ಣ ನಾಯಕ್ ಕರ್ಪೆ,ಸುರೇಶ್ ಕುಲಾಲ್,ಸಂಜೀವ ಕರ್ಕೇರಾ,ಸಂದೇಶ್ ಆಚಾರ್ಯ, ನವೀನಕರ್ಪೆ,ಪ್ರಭಾಕರ ನಾಯಕ್ ಮುಗೇರು ಮೊದಲಾದವರಿದ್ದರು

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts