ಬಂಟ್ವಾಳ

ಲೊರೆಟ್ಟೋ ಹಿಲ್ಸ್ ರೋಟರಿಯಿಂದ ನೂತನ ಸಭಾಭವನ 28ಕ್ಕೆ ಲೋಕಾರ್ಪಣೆ

ರೋಟರಿ ಕ್ಲಬ್ ಬಂಟ್ವಾಳ ಮುಂದಾಳತ್ವದಲ್ಲಿ ಕಳೆದ ಒಂದೂವರೆ  ವರ್ಷಗಳ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದ ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ವತಿಯಿಂದ ಲೊರೆಟ್ಟೋ ಹಿಲ್ಸ್‌ನಲ್ಲಿ  ನಿರ್ಮಿತವಾದ ಸ್ವಂತ ಕಟ್ಟಡದಲ್ಲಿ ರೋಟರಿ ಸಭಾಭವನ ದಿನಾಂಕ ಮೇ.28ರಂದು ಲೋಕಾರ್ಪಣೆಗೊಳ್ಳಲಿದೆ.

ಜಾಹೀರಾತು

ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಭಾಭವನವನ್ನು ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್ ಪಾದೆ ಉದ್ಘಾಟಿಸಲಿದ್ದು, ಲೋರೆಟ್ಟೋ ಚರ್ಚ್ ಧರ್ಮಗುರು ವಂ.ಫಾ. ಎಲಿಯಾಸ್ ಡಿಸೋಜ ಅವರು ಆಶೀರ್ವಚನ ನೀಡಲಿರುವರು. ರೋಟರಿಯ ಪ್ರಮುಖರಾದ ಪ್ರಕಾಶ್ ಕಾರಂತ, ಸಂಜೀವ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಕ್ಲಬ್ ಅಧ್ಯಕ್ಷ ಅವಿಲ್ ಮಿನೇಜಸ್ ಶುಕ್ರವಾರ ಸಂಜೆ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಲಬ್‌ನ ಎಲ್ಲಾ ಸದಸ್ಯರ ಸಹಕಾರ, ಮಾತೃ ಸಂಸ್ಥೆ ರೋಟರಿ ಕ್ಲಬ್  ಬಂಟ್ವಾಳ ಮಾರ್ಗದರ್ಶನದಿಂದ ಸ್ವಂತ ನಿವೇಶನದೊಂದಿಗೆ ಸ್ವಂತ ಕಟ್ಟಡ ನಿರ್ಮಾಣದ ಪ್ರಗತಿಗೆ ಸಹಕಾರವಾಯಿತು.

ರೋಟರಿ ಕ್ಲಬ್‌ನ ಇತಿಹಾಸದಲ್ಲಿಯೇ ಕ್ಲಬ್ ಪ್ರಾರಂಭಗೊಂಡು ಒಂದೂವರೆ ವರ್ಷದಲ್ಲಿಯೇ ಸ್ವಂತ ನಿವೇಶನ ಹೊಂದಿ ರೋಟರಿ ಕ್ಲಬ್‌ಗೆ ಸ್ವಂತ ಕಟ್ಟಡದೊಂದಿಗೆ ಸುಸಜ್ಜಿತ ರೋಟರಿ ಸಭಾಭವನ ನಿರ್ಮಾಣವಾಗಿದೆ. ಕ್ಲಬ್ ಸ್ಥಾಪನೆಗೊಂಡು ಎರಡು ವರ್ಷದಲ್ಲಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್‌ನಲ್ಲಿ ಹೊಸದೊಂದು ಕ್ಲಬ್‌ನ ಸ್ಥಾಪನೆಯಾಗಿದೆ. ಸಿದ್ಧಕಟ್ಟೆ ಪ್ರಥಮ ದರ್ಜೆ ಕಾಲೇಜುನಲ್ಲಿ ರೋಟರ್‍ಯಾಕ್ಟ್ ಕ್ಲಬ್ ಉದ್ಘಾಟನೆ ಕ್ಲಬ್ ಸಾಧನೆ ಎಂದ , ಅವರು, ಕ್ಲಬ್‌ನಲ್ಲಿ 6 ಜನ ಸದಸ್ಯರು ಪಿಎಚ್ ಎಫ್ ಸದಸ್ಯತನ ಪಡೆದಿದ್ದಾರೆ.  ರೋಟರಿ ಜಿಲ್ಲೆ ೩೧೮೦ರ ಎಲ್ಲಾ  ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಲಬ್‌ನ ಅಸ್ತಿತ್ವವನ್ನು  ಉಳಿಸಿದ್ದೇವೆ ಅಲ್ಲದೆ ಕ್ಯಾನ್ಸರ್ ಪೀಡಿತರಿಗೆ ನೆರವು, ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಮಾಜಮುಖಿ ಕಾರ್ಯ ನಡೆಸಿದ್ದೇವೆ ಎಂದರು.

ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ರೋಟರಿ ಮುಖಂಡರಾದ ನಾರಾಯಣ ಹೆಗ್ಡೆ, ಮುಂದಿನ ಸಾಲಿನ ನಿಯೋಜಿತ ಅಧ್ಯಕ್ಷ ಪದ್ಮರಾಜ ಬಲ್ಲಾಳ್, ಕಾರ್ಯದರ್ಶಿ ರಾಮಚಂದ್ರ ಶೆಟ್ಟಿಗಾರ್, ನಿಕಟಪೂರ್ವ ಕಾರ್ಯದರ್ಶಿ ಪ್ರಭಾಕರ ಪ್ರಭು ಕರ್ಪೆ, ಸುರೇಶ್ ಶೆಟ್ಟಿ, ಹರಿಪ್ರಸಾದ್ ಇದ್ದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ