ಪ್ರಮುಖ ಸುದ್ದಿಗಳು

ನಮೋ ಎಂದ ಮತದಾರರು, ಲೋಕಸಭೆಯಲ್ಲಿ ಬಿಜೆಪಿಯ ಹವಾ

  • 10 AM TRENDING – 330ಕ್ಕೂ ಅಧಿಕ ಸ್ಥಾನದಲ್ಲಿ ಎನ್.ಡಿ.ಎ. ಮುನ್ನಡೆ

ಮತದಾನೋತ್ತರ ಸಮೀಕ್ಷೆಗಳನ್ನು ನಿಜ ಮಾಡುವಂತೆ ಫಲಿತಾಂಶಗಳು ಕಾಣಿಸತೊಡಗಿವೆ. ಗುರುವಾರ ಮತ ಎಣಿಕೆ ನಡೆಯುತ್ತಿದ್ದಂತೆ ಮುನ್ನಡೆಗಳನ್ನು ಆಧರಿಸಿ ಹೇಳುವುದಾದರೆ ಎನ್.ಡಿ.ಎ. ಕಳೆದ ಬಾರಿಯಂತೆ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಯೊಂದೇ 277 ಸೀಟುಗಳಲ್ಲಿ ಮುಂದಿರುವುದು ಗಮನಾರ್ಹ.

ಜಾಹೀರಾತು

ಬೆಳಗ್ಗೆ 10 ಗಂಟೆಗೆ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ ಮುನ್ನಡೆ ಪಟ್ಟಿಯನ್ನು ಆಧರಿಸಿ ಹೇಳುವುದಾದರೆ, ಬಿಜೆಪಿ 277 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 51 ಸ್ಥಾನಗಳಲ್ಲಷ್ಟೇ ಮುಂದಿದ್ದರೆ, ತೃಣಮೂಲ ಕಾಂಗ್ರೆಸ್ 21, ಡಿಎಂಕೆ 21 ಸ್ಥಾನಗಳಲ್ಲಿ ಮುಂದೆ ಇವೆ.

ಪಶ್ಚಿಮ ಬಂಗಾಳದಲ್ಲಿ 42ರಲ್ಲಿ 35 ಸ್ಥಾನಗಳ ಮುನ್ನಡೆಯ ಪೈಕಿ 21ರಲ್ಲಿ ತೃಣಮೂಲ ಕಾಂಗ್ರೆಸ್, 12ರಲ್ಲಿ ಬಿಜೆಪಿ ಇದೆ. ಕೇರಳದಲ್ಲಿ ಕಾಂಗ್ರೆಸ್ 15 ಮುನ್ನಡೆ ಸಾಧಿಸಿದ್ದರೆ, ಕರ್ನಾಟಕದಲ್ಲಿ 23ರಲ್ಲಿ ಬಿಜೆಪಿ, 1ರಲ್ಲಿ ಪಕ್ಷೇತರ, 3ರಲ್ಲಿ ಕಾಂಗ್ರೆಸ್, ಜೆಡಿಎಸ್ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು ವಿಶೇಷ.

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ 13ನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 41624 ಮತಗಳ ಮುನ್ನಡೆ ಸಾಧಿಸಿದ್ದಾರೆ. ನಳಿನ್ ಕುಮಾರ್ ಕಟೀಲ್- 133065, ಮಿಥುನ್ ಎಂ.ರೈ- 91441 ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ