10.45 AM ಘಟಾನುಘಟಿಗಳಿಗೆ ಹಿನ್ನಡೆ, ಸುಮಲತಾ ಮುನ್ನಡೆ
ಈಗಿನ ಮುನ್ನಡೆ
ಒಟ್ಟು 28 ಬಿಜೆಪಿ 23, ಕಾಂಗ್ರೆಸ್ 3, ಜೆಡಿಎಸ್ 1, ಪಕ್ಷೇತರ 1
ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಈಗಾಗಲೇ ಕರ್ನಾಟಕದ ಒಟ್ಟಾರೆ ಮುನ್ನಡೆಯನ್ನು ನೋಡಿದಾಗ ಸಮ್ಮಿಶ್ರ ಸರಕಾರದ ಮಿತ್ರಪಕ್ಷಗಳು ಒಟ್ಟಾಗಿ ಚುನಾವಣೆ ಕಣಕ್ಕಿಳಿದರೂ ಬಿಜೆಪಿಯತ್ತ ಮತದಾರ ಗಮನಹರಿಸಿದ್ದಾರೆ.
ವಿಜಯಪುರದಲ್ಲಿ ಏಳು ಸುತ್ತಿನ ಮತ ಎಣಿಕೆ ನಂತರ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ 40 ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಮುನ್ನಡೆದಿದ್ದಾರೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್, ಕಲಬುರ್ಗಿಯಲ್ಲಿ ಜಾಧವ್ ಮುನ್ನಡೆಯಲ್ಲಿದ್ದರೆ, ಇಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿನ ಹಾದಿಯಲ್ಲಿದ್ದಾರೆ.
ಹಾನಸದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ನಂತರ ಪ್ರಜ್ಞಲ್ 40 ಸಾವಿರಕ್ಕೂ ಹೆಚ್ಚು ಮತ ಗಳ ಅಂತರದಿಂದ ಮುನ್ನಡೆ ಪಡೆದಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಬಿಕೆ ಹರಿಪ್ರಸಾದ್‌ಗಿಂತ 50 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ.
ದಾವಣಗೆರೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಎರಡನೇ ಸುತ್ತಿನ ಮತ ಎಣಿಕೆ ನಂತರ 22,305 ಮತಗಳ ಅಂತರದಿಂದ ಮುನ್ನಡೆ ಪಡೆದಿದ್ದಾರೆ.
ಒಟ್ಟು 28 ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳ ಮಾಹಿತಿ ಲಭ್ಯವಾಗಿದ್ದು, ಬಿಜೆಪಿ 22, ಕಾಂಗ್ರೆಸ್ 4, ಜೆಡಿಎಸ್ 2 ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಕೋಲಾರದಲ್ಲಿ ಸೋಲಿಲ್ಲದ ಸರದಾರರಾಗಿದ್ದ ಕಾಂಗ್ರೆಸ್ ಸಂಸದ ಕೆ.ಎಚ್. ಮುನಿಯಪ್ಪ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ಚಿಕ್ಕೋಡಿಯಲ್ಲಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿಗೆ ಹಿನ್ನಡೆಯಾಗಿದೆ. ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಹೊಂದಿದ್ದಾರೆ.