ತ್ಯಾಜ್ಯದ ಬಾಟಲಿ ಹೀಗಾಯ್ತು ನೋಡಿ
ತ್ಯಾಜ್ಯದ ಬಾಟಲಿ ಹೀಗಾಯ್ತು ನೋಡಿ
ನದಿ, ಸಾಗರ ಕಿನಾರೆಗಳಲ್ಲಿ ತ್ಯಾಜ್ಯ ಗಳೆಂದು ಎಸೆದ ಬಾಟಲ್ ಗಳಿಗೆ ಕಲಾತ್ಮಕ ಸ್ಪರ್ಶ ನೀಡಿ ಮನೆಯಲ್ಲಿ ಕಲಾಕೃತಿಯಾಗಿ ಶೋಭಿಸುವ ಮರು ಬಳಕೆಯ ಪ್ರಯತ್ನ ವನ್ನು ಮಂಗಳೂರಿನ ಕಲಾವಿದೆ ಮೇಘಾ ಮೆಂಡನ್ ಮಾಡಿದ್ದಾರೆ.
ಕಳೆದ ನಾಲ್ಕು ಭಾನುವಾರಗಳಲ್ಲಿ ಈ ಬಾಟಲ್ ಕಲಾಕೃತಿ ರಚನೆಯ ಶಿಬಿರವನ್ನು ಮಾಡಿದ್ದು ಇದರಲ್ಲಿ ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿರಿಯರು ಭಾಗವಹಿಸಿದ್ದರು.
ಇದರಲ್ಲಿ ರಚನೆಯಾದ ಬಾಟಲ್ ಕಲಾಕೃತಿ ಗಳ ಪ್ರದರ್ಶನ ಈಗ ಸಾರ್ವಜನಿಕರಿಗೆ ಮೇ 25 ಮತ್ತು 26 ರಂದು ಬೊಕ್ಕ ಪಟ್ಟ್ನ ದ ಫಲ್ಗುಣಿ ನದೀ ಕಿನಾರೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಮನೆ ಮನೆಯ ತ್ಯಾಜ್ಯ ಗಳು ಬೀದಿ, ನದಿ, ಸಾಗರ ಬದಿಗೆ ಹೋಗದೇ ಮನೆಯಲ್ಲಿ ಕಲಾಕೃತಿ ಗಳಾಗು ವ ರೀತಿಯಲ್ಲಿ ಮರು ಬಳಕೆ ಆಗಬೇಕೆಂಬುದು ಈ ಪ್ರಕಾರದ ಪ್ರಯತ್ನ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…