ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಮಂಕಿ ಎಂಬಲ್ಲಿ ಕಡಲ ತೀರದಲ್ಲಿ ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಬಾಲಕಿಯರು ಸೇರಿ ಮೂರು ಶವಗಳು ಪತ್ತೆಯಾಗಿವೆ.
ಸೋಮವಾರ ಬೆಳಿಗ್ಗೆ ಈ ಅಪರಚಿತ ದೇಹಗಳು ಪತ್ತೆಯಾಗಿದ್ದು ಮಂಕಿ ಸಮೀಪ ಕೊಪದಮಕಿ ಸಮುದ್ರ ತೀರದಲ್ಲಿ ಶವಗಳು ದೊರಕಿದೆ. ಮಹಿಳೆ ಸುಮಾರು 35 ವರ್ಷದವರಾದರೆ ಬಾಲಕಿಯರಿಬ್ಬರೂ ಅಪ್ರಾಪ್ತ ವಯಸ್ಕರೆಂದು ತಿಳಿದುಬಂದಿದೆ.