ಶನಿವಾರ ಮುಸ್ಸಂಜೆಯ ವೇಳೆ ಬಂಟ್ವಾಳ ಪರಿಸರದಲ್ಲಿ ತುಂತುರು ಮಳೆಯಾಗಿದೆ.
ಭಾರಿ ಶಬ್ದದ ಗುಡುಗು, ಮಿಂಚು ಇದ್ದರೂ ಕೆಲ ಹನಿಗಳಷ್ಟೇ ಮಳೆ ಸುರಿಯಿತು. ಇಡೀ ದಿನ ಬಿಸಿಲಿನ ಕಾವಿನಿಂದ ತತ್ತರಿಸಿದ್ದ ಬಂಟ್ವಾಳ ಪರಿಸರದ ಜನತೆಗೆ ಕೆಲ ಕಾಲ ತಂಪಾದ ವಾತಾವರಣವನ್ನು ತಂದುಕೊಟ್ಟರೂ, ರಾತ್ರಿಯಾದಂತೆ ಸೆಖೆ ಜಾಸ್ತಿಯಾಗತೊಡಗಿತು. ಹವಾಮಾನ ಇಲಾಖೆ ಈಗಾಗಲೇ ಒಂದೆರಡು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)