ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕೇಂದ್ರ ಘಟಕದ ಆಶ್ರಯದಲ್ಲಿ ಐದನೆ ವಾರ್ಷಿಕೋತ್ಸವದ ಪ್ರಯುಕ್ತ ೫ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದ ಮರ್ಹೂಂ ಅಬ್ದುಲ್ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ನೆರವೇರಿತು.
ಪಾಣಕ್ಕಾಡ್‌ನ ರಶೀದ್ ಅಲಿ ಶಿಹಾಬ್ ತಂಙಳ್ ಅವರು ದುವಾಃ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಿದರು. ದ.ಕ. ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಖಾಝಿ ಅವರು ಅಧ್ಯಕ್ಷತೆ ವಹಿಸಿ, ಸಾಮೂಹಿಕ ವಿವಾಹದ ನೇತೃತ್ವ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಅಧ್ಯಕ್ಷ ನಝೀರ್ ಅಝ್ಹರಿ ನಿಖಾಹ್ ಕುತುಬ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿ, ಇಸ್ಲಾಮಿನಲ್ಲಿ ಸರಳ ವಿವಾಹದ ಮಹತ್ವವನ್ನು ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ.ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಯು.ಕೆ. ಮೋನು ಕಣಚೂರು, ಜೆಡಿಎಸ್ ರಾಜ್ಯಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಸಭಾಕಾರ್ಯಕ್ರಮದಲ್ಲಿ ಮಾತನಾಡಿ, ವಧುವರರಿಗೆ ಶುಭಹಾರೈಸಿದರು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕೇಂದ್ರ ಘಟಕದ ಅಧ್ಯಕ್ಷ ಇಸ್ಮಾಯಿಲ್ ಅರಬಿ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಧಾರ್ಮಿಕ ಮುಖಂಡರಾದ ಅನ್ಸಾರ್ ಫೈಝಿ ಅಲ್ ಬುರ್ಹಾನಿ, ಅಶ್ರಫ್ ಫೈಝಿ ಕೊಡಗು, ಕೆ.ಪಿ. ಇರ್ಷಾದ್ ದಾರಿಮಿ, ಯೂಸುಫ್ ಮುಸ್ಲಿಯಾರ್, ಸ್ವಾದಿಕ್ ಅಝ್ಹರಿ ಕೊಪ್ಪ, ಹೈದರ್ ಅಲಿ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ರಿಯಾಝ್ ಹುಸೈನ್, ಅಬ್ದುಲ್ ಖಾದರ್ ಮಾಸ್ಟರ್, ಲತೀಫ್ ಖಾನ್, ಯೂಸುಫ್ ಕರಂದಾಡಿ ಉಪಸ್ಥಿತರಿದ್ದರು.ಬಂಟ್ವಾಳ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಉಸ್ಮಾನ್ ದಾರಿಮಿ ಸ್ವಾಗತಿಸಿ, ಎಸ್ಕೆಸ್ಸೆಸ್ಸೆಫ್ ಬಂಟ್ವಾಳದ ಕಾರ್ಯದರ್ಶಿ ಹಾರೂನ್ ರಶೀದ್ ವಂದಿಸಿ, ಪತ್ರಕರ್ತ ಲತೀಫ್ ನೇರಳಕಟ್ಟೆ ನಿರೂಪಿಸಿದರು.ಮಧ್ಯಾಹ್ನದ ಬಳಿಕ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮ ನಡೆಯಿತು. ಮಂಗಳೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸ್ವದಕತುಲ್ಲಾ ಫೈಝಿ ಹಾಗೂ ವಳಚ್ಚಿಲ್ ಮುದರ್ರಿಸ್ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಅನುಸ್ಮರಣಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನಂಡೆಪೆಂಙಳ್ ಅಭಿಯಾನದ ಅಧ್ಯಕ್ಷ ನೌಶದ್ ಹಾಜಿ ಸುರಲ್ಪಾಡಿ, ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿಯ ಕಾರ್ಯದರ್ಶಿ ಹಾಜಿ ಉಬೈದುಲ್ಲಾ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಝೋನ್‌ನ ಅನ್ವರ್ ಅಝ್ಹರಿ, ಸಿದ್ದೀಕ್ ರಹ್ಮಾನಿ, ಸವಾಝ್ ಬಂಟ್ವಾಳ, ಮುಹಮ್ಮದ್ ಇಕ್ಬಾಲ್, ಬಿಲಾಲ್, ರುಮಾನ್, ಬಿ.ಎಂ.ಶಾಫಿ, ಸತ್ತಾರ್, ಹಾಜಿ ಅಬ್ದುರ್ರಹ್ಮಾನ್, ಇಮ್ತಿಯಾಝ್ ಬಂಟ್ವಾಳ, ಎಂ.ಇಸ್ಮಾಯಿಲ್, ಮುಸ್ತಫಾ, ಝಹೂರ್, ಅಬ್ದುಲ್ ಹಮೀದ್, ರಫೀಕ್ ಹಾಜರಿದ್ದರು.