ಮಿತ್ತ ಪೆರಾಜೆ ಶ್ರೀ ಗುಡ್ಡಚಾಮುಂಡಿ ದೈವದ ವರ್ಷಾವಧಿ ವಲಸರಿ ಜಾತ್ರೆ ಬುಧವಾರ ರಾತ್ರಿ ನಡೆಯಿತು.
ಪೆರಾಜೆ ಗ್ರಾಮದಲ್ಲಿ ನಡೆಯುವ ಕೊನೆಯ ಜಾತ್ರೆಯಾದ ಮಿತ್ತಪೆರಾಜೆ ವಲಸರಿ ಜಾತ್ರೆಯಲ್ಲಿ ಊರಿನ ಹಾಗೂ ಪರ ಊರ ಭಕ್ತರ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.ಏ.18ರಂದು ಪೆರಾಜೆಗುತ್ತುವಿನ ಮನೆಯಲ್ಲಿ ಪೂರ್ವ ಕಟ್ಟುಕಟ್ಟಲೆಗಳಂತೆ ಧಾರ್ಮಿಕ ವಿಧಿವಿಧಾನಗಳ ಬಳಿಕ ಗೊನೆ ಕಡಿದು ಎ.24 ರಂದು ರಾತ್ರಿ ಭಂಡಾರ ಬಂದು ಬಳಿಕ ದೈವದ ವಲಸರಿ ನೇಮ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಗಮಸಿ ಪ್ರಸಾದ ಸ್ಬೀಕರಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)